ಆಂಧ್ರಪ್ರದೇಶದ ರಾಯಲಸೀಮೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಮಳೆಗೆ ಒಟ್ಟಾರೆ 17 ಮಂದಿ ಮೃತಪಟ್ಟಿದ್ದಾರೆ.
ಚಿತ್ತೂರು, ಕಡಪ, ಕರ್ನೂಲು, ಆನಂತಪುರ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದು, 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್ ಸಿಲುಕಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ, 18 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.
ಬಸ್‌ನ ಚಾಲಕರು, ಪ್ರಯಾಣಿಕರು ಬಸ್‌ನ ಮೇಲೆ ಹತ್ತಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಒಟ್ಟಾರೆ ಪ್ರವಾಹದಲ್ಲಿ ಕೊಚ್ಚಿ ಹೋದ ಕೆಲವರನ್ನು ಮಾತ್ರ ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದ್ದು, ಇನ್ನೂ 30 ಮಂದಿ ನಾಪತ್ತೆಯಾಗಿದ್ದಾರೆ.
ಚೆಯ್ಯೇರು ನದಿ ತುಂಬಿ ಹರಿಯುತ್ತಿದ್ದು, ಇದರಿಂದಾಗಿ ಅನ್ನಮಯ್ಯ ಅಣೆಕಟ್ಟು ಭರ್ತಿಯಾಗಿದೆ. ಇದರಿಂದ ನೀರನ್ನು ಹೊರಬಿಡಲಾಗುತ್ತಿದ್ದು, ಸಮೀಪದ ಗ್ರಾಮಗಳಾದ ಗುಂಡ್ಲೂರು, ಶೇಷಮಂಬಾಪುರಮ್, ಮಂದಪಲ್ಲಿ, ನಂದಲೂರ್, ರಾಜಂಪೇಟ್ ಮತ್ತು ಇತರ ಸ್ಥಳಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹದಿಂದಾಗಿ ಕೊಚ್ಚಿ ಹೋದ ಬಸ್ ಹಾಗೂ ಉಳಿದ ಬಸ್‌ಗಳ ಟಾಪ್ ಮೇಲೆ ಜನರ ಜೀವ ಉಳಿಸಿಕೊಳ್ಳಲು ಹತ್ತಿರುವ ವಿಡಿಯೋಗಳು ವೈರಲ್ ಆಗಿದೆ.
Atleast 3 people, including the conductor of a #RTCbus and 2 passenger in the vehicle, were reportedly washed away in gushing waters #Flashfloods of #Cheyyeru stream in #Rajampet mandal of #Kadapa district.#KadapaFloods #KadapaRains #Andhrapradeshrains pic.twitter.com/sRAOaqxf1t
— Surya Reddy (@jsuryareddy67) November 19, 2021