ಆಂಧ್ರಪ್ರದೇಶ, ಅ.28: ಆಂಧ್ರಪ್ರದೇಶದ ವಿಜಯನಗರಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಗೆಳತಿಗೆ ಮೇಸೆಜ್ ಮಾಡಿದ್ದಕ್ಕಾಗಿ 19 ವರ್ಷದ ಸ್ನೇಹಿತನನ್ನು ಯುವಕ ಕೊಲೆ ಮಾಡಿರುವ ಘಟನೆ ನಡೆದಿದೆ.
ಪ್ರಕರಣ ಬೆನ್ನತ್ತಿದ್ದ ಪೊಲೀಸರು ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್‌ನ ಸ್ನೇಹಿತ ಹಾಗೂ ನೆರೆಮನೆಯವನಾದ ಬೊಡ್ಡೂರು ಬ್ರಹ್ಮಾಜಿ ಅಲಿಯಾಸ್ ಬಾಲು (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲು ಮತ್ತು ನವೀನ್ ಉತ್ತಮ ಸ್ನೇಹಿತರಾಗಿದ್ದರು. ಆದರೆ ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ ನವೀನ್‌ನನ್ನು ಆರೋಪಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 25 ರಂದು ದ್ವಾರಪುಡಿ ಪ್ರದೇಶದ ರೈಲ್ವೆ ಹಳಿ ಬಳಿ ವಿಜಯನಗರದ ಕೆಎಲ್ ಪುರಂ ನಿವಾಸಿ ತೊರ್ತು ನವೀನ್ ಶವ ಪತ್ತೆಯಾಗಿತ್ತು.