News Karnataka Kannada
Tuesday, March 19 2024
ಆಂಧ್ರಪ್ರದೇಶ

ಹೈದರಾಬಾದ್: ಹಿರಿಯ ನಟ ಶರತ್‌ ಬಾಬು ನಿಧನ

Hyderabad: Veteran actor Sharat Babu passed away
Photo Credit :

ಹೈದರಾಬಾದ್: ಹಿರಿಯ ನಟ ಶರತ್ ಬಾಬು ಸೋಮವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕಳೆದ ತಿಂಗಳು ಬಾಬು ಎಐಜಿ ಆಸ್ಪತ್ರೆ ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಟನನ್ನು ಏಪ್ರಿಲ್ 20 ರಂದು ಬೆಂಗಳೂರಿನಿಂದ ಹೈದರಾಬಾದ್‌ಗೆ ಕರೆತಂದು ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತಿದ್ದರು. ಚೆನ್ನೈನಲ್ಲಿ ಅವರ ಅಂತಿಮ ವಿಧಿ ವಿಧಾನಗಳು ನಡೆಯುವ ಸಾಧ್ಯತೆ ಇದೆ. ನಟನ ನಿಧನಕ್ಕೆ ಚಿತ್ರರಂಗದ ಪ್ರಮುಖರು, ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಶರತ್ ಬಾಬು ನಿಜವಾದ ಹೆಸರು ಸತ್ಯಂ ಬಾಬು ದೀಕ್ಷಿತುಲು. 1973 ರಲ್ಲಿ ತೆಲುಗು ಚಲನಚಿತ್ರ “ರಾಮ ರಾಜ್ಯ” ಮೂಲಕ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ತಮಿಳು ಚಲನಚಿತ್ರಗಳಾದ “ಪಟ್ಟಿನ ಪ್ರವೇಶ” (1977) ಮತ್ತು “ನಿಜಲ್ ನಿಜಮಗಿರದು” (1978) ಕೆ ನಿರ್ದೇಶನದ ಮೂಲಕ ಜನಪ್ರಿಯರಾದರು. 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅತ್ಯುತ್ತಮ ನಟನೆಗಾಗಿ ಅವರು ಒಂಬತ್ತು ಬಾರಿ ನಂದಿ ಪ್ರಶಸ್ತಿಗಳನ್ನು ಪಡೆದಿದ್ದರು.

ಆಂಧ್ರಪ್ರದೇಶದವರಾದ ಶರತ್ ಬಾಬು ಅವರು ಪೊಲೀಸ್ ಅಧಿಕಾರಿಯಾಗಲು ಬಯಸಿದ್ದರು ಆದರೆ ದೃಷ್ಟಿ ಸಮಸ್ಯೆಯಿಂದಾಗಿ ಅವರ ಕನಸನ್ನು ನನಸಾಗಿಸಲು ಸಾಧ್ಯವಾಗಲಿಲ್ಲ. ಅವರ ತಂದೆ ಅವರು ತಮ್ಮ ವ್ಯವಹಾರಕ್ಕೆ ಸೇರಬೇಕೆಂದು ಬಯಸಿದ್ದರು ಆದರೆ ಅವರ ತಾಯಿಯ ಬೆಂಬಲದೊಂದಿಗೆ ಅವರು ಚಿತ್ರರಂಗಕ್ಕೆ ಪ್ರವೇಶಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು