News Karnataka Kannada
Saturday, April 20 2024
Cricket
ಅಸ್ಸಾಂ

ಅಶ್ಲೀಲ ವಿಡಿಯೋ ನೋಡಲು ನಿರಾಕರಿಸಿದ್ದಕ್ಕಾಗಿ ಆರು ವರ್ಷದ ಬಾಲಕಿಯ ಕೊಲೆ

Murder Girl 16082021
Photo Credit :

ಅಸ್ಸಾಂ : ಅಶ್ಲೀಲ ವಿಡಿಯೋ ನೋಡಲು ನಿರಾಕರಿಸಿದ್ದಕ್ಕಾಗಿ ಆರು ವರ್ಷದ ಬಾಲಕಿಯನ್ನು ಮೂವರು ಅಪ್ರಾಪ್ತ ವಯಸ್ಕ ಬಾಲಕರು ಕೊಲೆಗೈದಿರುವ ಘಟನೆ ಅಸ್ಸಾಂನ ನಾಗೂನ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳು 8 ರಿಂದ 11 ವರ್ಷದೊಳಗಿನವರಾಗಿದ್ದು, ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಅಮಾನವೀಯ ಘಟನೆ ನಾಗೂನ್ ಜಿಲ್ಲೆಯ ಬಲಿಬತ್ ಕಲ್ಲು ಕ್ರಶರ್ ಬಳಿ ನಡೆದಿದೆ. ಮೃತ ಬಾಲಕಿಯ ದೇಹ ಶೌಚಾಲಯದಲ್ಲಿ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ.

ಆರೋಪಿಗಳು ಮೂವರು ಒಂದೇ ಊರಿನವರಾಗಿದ್ದು. ಸಂತ್ರಸ್ತ ಬಾಲಕಿ ಕೂಡ ಅದೇ ಊರಿನವಳಾಗಿದ್ದಳು. ಆರೋಪಿಗಳು ಅಶ್ಲೀಲ ವ್ಯಸನಿಗಳಾಗಿದ್ದು, ಬಾಲಕಿಗೆ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯಿಸಿದ್ದರು. ಆಕೆ ನೀಡಲು ನಿರಾಕರಿಸಿದ್ದಕ್ಕಾಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

11 ವರ್ಷದ ಬಾಲಕ ತನ್ನ ತಂದೆ ಮೊಬೈಲ್‌ನ್ನು ಅಶ್ಲೀಲ ವಿಡಿಯೋ ನೋಡಲು ಬಳಸುತ್ತಿದ್ದ ಎಂಬುದು ತನಿಖೆ ಸಮಯದಲ್ಲಿ ಬಯಲಾಗಿದೆ. ಮೊಬೈಲ್ ಕೂಡ ವಶಕ್ಕೆ ಪಡೆಯಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು