News Kannada
Sunday, December 04 2022

ಅಸ್ಸಾಂ

ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಉಗ್ರರನ್ನು ಬೆಂಬಲಿಸಿ ಬರಹ ; ಅಸ್ಸಾಂ ನಲ್ಲಿ 14 ಜನರ ಬಂಧನ

Photo Credit :

ಗೌಹಾತಿ : ಅಫ್ಘಾನಿಸ್ತಾನ್​​ನಲ್ಲಿ ತಾಲಿಬಾನ್ ಉಗ್ರರ ಹಿಂಸೆ ಮುಂದುವರಿದಿದೆ. ಭಾರತದಲ್ಲಿ ತಾಲಿಬಾನಿಗಳಿಗೆ ಬೆಂಬಲಿಸಿದ ವರದಿಗಳಾಗುತ್ತಿವೆ. ಈ ನಡುವೆ ತಾಲಿಬಾನಿಗಳನ್ನ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಂಬಂಧ ಅಸ್ಸೋಂನಲ್ಲಿ 14 ಜನರನ್ನು ಬಂಧಿಸಲಾಗಿದೆ.
ಶುಕ್ರವಾರ ರಾತ್ರಿಯಿಂದ ಈವರೆಗೆ 14 ಮಂದಿಯ ಬಂಧನವಾಗಿದೆ. ಬಂಧಿತರ ವಿರುದ್ಧ ಐಟಿ ಕಾಯ್ದೆ ಸೇರಿ ಸಿಆರ್​ಪಿಸಿಯ ವಿವಿಧ ಸೆಕ್ಷನ್​​ಗಳಡಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಮಾಜದ ಸ್ವಾಸ್ತ್ಯ ಹಾಳುಗೆಡುವ ಪೋಸ್ಟ್​ಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಎಂದಿರುವ ಪೊಲೀಸರು, ಇಂತಹ ಕೃತ್ಯ ಗಮನಕ್ಕೆ ಬಂದರೆ ತಕ್ಷಣ ಬಂಧಿಸಲಾಗುವುದು ಎಂದಿದ್ದಾರೆ.ಬಂಧಿತರಲ್ಲಿ ತಲಾ ಇಬ್ಬರು ಕಾಮ್ರೂಪ್, ಬರ್ಪೇಟ್​​, ದುಬ್ರಿ ಮತ್ತು ಕರೀಂಗಂಜ್​​​​​ ಜಿಲ್ಲೆಯವರು ಎಂದು ತಿಳಿದು ಬಂದಿದೆ. ದಾರಂಗ್, ಕ್ಯಾಚಾರ್​, ಹೈಲಾಕಂಡಿ, ಸೌತ್ ಸಲ್ಮಾರಾ, ಗೌಲ್ಪಾರಾ ಮತ್ತು ಹೋಜಯ್ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರನ್ನು ಬಂಧಿಸಲಾಗಿದೆ ಎಂದಿದ್ದಾರೆ.ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಅಸ್ಸೋಂ ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಡಿಐಜಿ ಬರುವಾ ಹೇಳಿದ್ದಾರೆ. ಅಲ್ಲದೆ ಇಂತಹ ಕೃತ್ಯವೇನಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರುವಂತೆ ಜನರಿಗೆ ಮನವಿ ಮಾಡಿದ್ದಾರೆ.

 

See also  ಅಸ್ಸಾಂನ ಕರೀಂಗಂಜ್ ನಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ಬಲಿ, ಓರ್ವನಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು