News Kannada
Friday, March 31 2023

ಅಸ್ಸಾಂ

ಮನೋಹರಿ ಚಹಾ ಪುಡಿ ಒಂದು ಕೆ.ಜಿ.ಗೆ ಬರೋಬ್ಬರಿ 99,999 ರೂಪಾಯಿಗೆ ಮಾರಾಟ !

Photo Credit :

ಗುವಾಹಟಿ: ಅಸ್ಸೋಂನ ಪ್ರಸಿದ್ಧ, ಅಪರೂಪದ ಮತ್ತು ಸ್ವಾದಭರಿತ ಚಹಾ ಪುಡಿಯಾದ ‘ಮನೋಹರಿ ಗೋಲ್ಡ್​ ಟೀ’ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮಾರಾಟ ಕಾಣುವ ಮೂಲಕ ತನ್ನದೇ ದಾಖಲೆ ಅಳಿಸಿ ಹಾಕಿದೆ.

ಗುವಾಹಟಿ ಟೀ ಮಾರಾಟ ಕೇಂದ್ರದಲ್ಲಿ ನಡೆದ ಹರಾಜಿನಲ್ಲಿ ಮನೋಹರಿ ಚಹಾ ಪುಡಿ ಒಂದು ಕೆ.ಜಿ.ಗೆ ಬರೋಬ್ಬರಿ 99,999 ರೂಪಾಯಿಗೆ ಮಾರಾಟವಾಗಿದ್ದು, ಇತಿಹಾಸ ಸೃಷ್ಟಿಸಿದೆ. ಸೌರವ್​ ಟೀ ಟ್ರೇಡಸ್​ ಕಂಪನಿ ಗೋಲ್ಟ್​ ಟೀ ಪೌಡರನ್ನು ಇಷ್ಟು ಪ್ರಮಾಣದ ಬಿಡ್​ ಹೂಡಿ ಖರೀದಿ ಮಾಡಿದೆ.

ಹಿಂದಿನ ವರ್ಷ ಕಂಟೆಂಪರರಿ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್​ನಿಂದ ಹರಾಜಿಗಿಟ್ಟಿದ್ದ ಇದೇ ಮನೋಹರಿ ಗೋಲ್ಡ್​ ಟೀ ಪ್ರತಿ ಕಿಲೋಗೆ 75 ಸಾವಿರ ರೂಪಾಯಿ ಮಾರಾಟವಾಗಿ ದಾಖಲೆ ಬರೆದಿತ್ತು. ಇದೀಗ ಮತ್ತೆ 99,999 ರೂಪಾಯಿಗೆ ಮಾರಾಟವಾಗಿ ತನ್ನದೇ ದಾಖಲೆಯನ್ನು ಮುರಿದಿದೆ.

ಈ ಚಹಾಪುಡಿ ವಿಶೇಷತೆ ಏನು?

ಈ ಚಹಾಪುಡಿ ಬಹಳ ವಿಶೇಷವಾಗಿದ್ದು, ಇದನ್ನು ಅತ್ಯುತ್ತಮವಾದ ಮತ್ತು ಎಳೆಯ ಪಕಳೆಗಳಿಂದ ತಯಾರು ಮಾಡಲಾಗುತ್ತದೆ. ಈ ಮಾದರಿಯ ಟೀ ಪುಡಿಯ ಎಲೆಗಳು ಬೆಳಗಿನ ಜಾವದಲ್ಲಿ ಮಾತ್ರ ಹೆಕ್ಕಲು ಸಿಗುತ್ತವೆ. ಇದರಿಂದಾಗಿ ಗೋಲ್ಡ್​ ಟೀ ಭಾರೀ ಮಹತ್ವ ಪಡೆದುಕೊಂಡಿದೆ.

ಇದೀಗ ಮನೋಹರಿ ಗೋಲ್ಡ್​ ಟೀ ಪೌಡರ್​ ಅನ್ನು ಗುವಾಹಟಿ ಮೂಲದ ಚಹಾ ವ್ಯಾಪಾರಿ ವಿಷ್ಣು ಟೀ ಕಂಪನಿ ಖರೀದಿಸಿದ್ದು, ಅದನ್ನು ತಮ್ಮ ವೆಬ್‌ಸೈಟ್ 9amtea.com ನಲ್ಲಿ ಪ್ರಪಂಚದಾದ್ಯಂತ ಮಾರಾಟಕ್ಕಿಟ್ಟಿದೆ.

See also  ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಉಗ್ರರನ್ನು ಬೆಂಬಲಿಸಿ ಬರಹ ; ಅಸ್ಸಾಂ ನಲ್ಲಿ 14 ಜನರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು