News Kannada
Monday, March 04 2024
ಬಿಹಾರ

ಪಾಟ್ನಾ: ಮದುವೆಯ ದಿನದಂದೇ ವರ ನಾಪತ್ತೆ

Photo Credit :

ಪಾಟ್ನಾ : ಮದುವೆಯ ದಿನದಂದೇ ವರ ನಾಪತ್ತೆಯಾಗಿದ್ದು, ಎಷ್ಟೇ ಕಾದರೂ ವರ ಬಾರದಿದ್ದಕ್ಕೆ ವಧುವಿನ ಕಟುಂಬಸ್ಥರು ಪೊಲೀಸ್ ಠಾಣೆ ಮಟ್ಟಿಲು ಹತ್ತಿದ ಘಟನೆ ಬಿಹಾರದ ಧನ್‍ಬಾದ್ ಪ್ರದೇಶದಲ್ಲಿ ನಡೆದಿದೆ. ಧನ್ಬಾದ್‍ನ ಭುಲಿ ನಿವಾಸಿ ರತ್ನೇಶ್ ಕುಮಾರ್ ವರ.

ಇವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ಸಮಯದಲ್ಲಿ ರತ್ನೇಶ್ ನಾಪತ್ತೆಯಾಗಿದ್ದು, ಎಷ್ಟು ಕಾದರೂ ಬಾರದೇ ಇದ್ದಾಗ ವಧುವಿನ ಕಡೆಯವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಧುವಿನ ಸಂಬಂಧಿಕರು, ವರ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ನಂತರದಲ್ಲಿ ವರ ವಾಪಸ್ ಬಂದಿದ್ದಾನೆ. ತಡರಾತ್ರಿ ಮದುವೆ ಮಾಡಲಾಯಿತು.

ಕಳೆದ ವರ್ಷವೂ ಇದೇ ರೀತಿ ಆಗಿತ್ತು, ಮದುವೆಯ ದಿನಾಂಕ ನಿಗದಿಯಾಗಿತ್ತು. ಆದರೆ ವರ ರತ್ನೇಶ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ನಡುವೆ ಒಪ್ಪಂದವಾಗಿತ್ತು ಎಂದು ವಧು ಕಡೆಯವರು ತಿಳಿಸಿದ್ದಾರೆ. ಆಗ ರತ್ನೇಶ್ ಕಡೆಯವರು ಪೊಲೀಸ್ ಸಮ್ಮುಖದಲ್ಲಿಯೇ ಮಾರ್ಚ್ 25ರಂದು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇದರಿಂದಾಗಿ ವಧು ಕಡೆಯವರು ಮದುವೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದರು. ಆದರೆ ವರ ಬಾರದಿದ್ದಾಗ ವಧುವಿನ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು