ಪಾಟ್ನಾ: ಕರೊನಾ ಲಸಿಕೆ ನೀಡುವುದಾಗಿ ಯುವತಿಯೊಬ್ಬಳನ್ನು ನಂಬಿಸಿ ಆರೋಗ್ಯ ಕೇಂದ್ರದಿಂದ ಕರೆದೊಯ್ದ ಕಾಮುಕರು, ಆಕೆಯನ್ನು ಹಗ್ಗದಿಂದ ಕಟ್ಟಿಹಾಕಿ ಗ್ಯಾಂಗ್ರೇಪ್ ಮಾಡಿರುವ ಘಟನೆ ಬಿಹಾರ ರಾಜಧಾನಿ ಪಟ್ನಾದಲ್ಲಿ ನಡೆದಿದೆ.
ಗ್ಯಾಂಗ್ ರೇಪ್ ಮಾಡಿ ಬಂಧನಕ್ಕೊಳಗಾಗಿರುವವರನ್ನು ರಾಕಿ ಮತ್ತು ಮೊಂಟು ಎಂದು ಗುರುತಿಸಲಾಗಿದೆ. ಪಟ್ನಾದ ಆರೋಗ್ಯ ಕೇಂದ್ರದಲ್ಲಿ ಯುವತಿಯನ್ನು ಭೇಟಿಯಾದ ಈ ಇಬ್ಬರು ಆರೋಪಿಗಳು ಲಸಿಕೆ ನೀಡುವುದಾಗಿ ಆಕೆಯನ್ನು ನಂಬಿಸಿ ನಿರ್ಜನ ಮನೆಯೊಂದಕ್ಕೆ ಕರೆದೊಯ್ದು, ಹ್ಯಾಂಡ್ ಕರ್ಚೀಫ್ ನಿಂದ ಬಾಯಿ ಮುಚ್ಚಿದ್ದಾರೆ. ಆಮೇಲೆ ತನ್ನ ಕೈ-ಕಾಲುಗಳನ್ನು ಕಟ್ಟಿಹಾಕಿದ್ದರು ಎಂದು ಸಂತ್ರಸ್ತೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.ಇಬ್ಬರು ಕಾಮುಕರು ಅವಳ ಮೇಲೆ ಅತ್ಯಾಚಾರವೆಸಗಿ ಆಮೇಲೆ ಅವಳನ್ನು ಅವರ ಮನೆಗೆ ಬಿಟ್ಟು ಕಳುಹಿಸಿದ್ದಾರೆ. ಮನೆಗೆ ಹೋದಬಳಿಕ ಪೋಷಕರ ಮುಂದೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಆನಂತರ ಪೋಷಕರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸಂತ್ರಸ್ತೆ ಗುರುತಿಸಿದ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆ 18 ವರ್ಷಕ್ಕಿಂತ ಕಿರಿಯಳು ಎನ್ನಾಲಾಗುತ್ತಿದ್ದು, ಸದ್ಯ ಬಂಧನವಾಗಿರುವ ಆರೋಪಿಗಳ ವಿಚಾರಣೆ ನಡೆಯುತ್ತಿದೆ.