ಬಿಹಾರ : ಬಿಹಾರದ ಪಾಟ್ನಾದಲ್ಲಿ ಗರ್ಭಿಣಿ ಮೇಲೆ ಮೂವರು ಕಾಮಕರು ಅತ್ಯಾಚಾರ ಎಸಗಿದ್ದಾರೆ. ಆರು ತಿಂಗಳ ಗರ್ಭಿಣಿ ಮನೆಯ ಮುಂದೆ ವಾಕಿಂಗ್ ಮಾಡುತ್ತಿರುವ ಸಂದರ್ಭ ಆಕೆಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ.
ನಂತರ ಪ್ರಜ್ಞೆ ತಪ್ಪುವಂತೆ ಹೊಡೆದು ರೈಲ್ವೆ ಹಳಿ ಬಳಿ ಆಕೆಯನ್ನು ಬಿಸಾಡಿ ಹೋಗಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆಗೆ ಮನೆಯವರು ಆಕೆಯನ್ನು ರೈಲ್ವೆ ನಿಲ್ದಾಣದಲ್ಲಿ ಕಂಡಿದ್ದಾರೆ. ಪೊಲೀಸರಿಗೆ ದೂರು ದಾಖಲಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.