News Kannada
Tuesday, March 21 2023

ಬಿಹಾರ

ಮನುಸ್ಮೃತಿ ಪುಸ್ತಕ ಸುಟ್ಟು ಹಾಕಿದ ಮಹಿಳೆ ವಿಡಿಯೋ ವೈರಲ್‌

Video of woman burning Manusmriti book goes viral
Photo Credit : By Author

ಪಾಟ್ನಾ: ಮಹಿಳೆಯೊಬ್ಬರು ಮನುಸ್ಮೃತಿಯ ಪ್ರತಿಯನ್ನು ಸುಟ್ಟುಹಾಕಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್‌ಜೆಡಿ ಸದಸ್ಯೆ ಎನ್ನಲಾದ ಮಹಿಳೆಯೊಬ್ಬರು ಪುಸ್ತಕವನ್ನು ಸುಟ್ಟು ಹಾಕಿದ್ದಾರೆ.

ಆದರೆ, ಈ ಬಗ್ಗೆ ಆಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಹಿಳೆ ಕೋಳಿ ಬೇಯಿಸುವಾಗ ಮನುಸ್ಮೃತಿಯ ಪ್ರತಿಯನ್ನು ತೆಗೆದುಕೊಂಡು ಒಲೆಯೊಳಗೆ ಇಡುತ್ತಿರುವುದನ್ನು ವೈರಲ್ ವಿಡಿಯೋದಲ್ಲಿದೆ. ನಂತರ ಆಕೆ ಪುಸ್ತಕದ ಸುಡುವ ಪ್ರತಿಯೊಂದಿಗೆ ಸಿಗರೇಟನ್ನು ಹಚ್ಚುವ ದೃಶ್ಯವಿದೆ.

ಘಟನೆಯ ನಂತರ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ರೀತಿಯ ಘಟನೆಗಳು ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಹೇಳಿದ್ದಾರೆ. ಕೆಲವು ಬಳಕೆದಾರರು ಮನುಸ್ಮೃತಿ ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಹರಡುತ್ತದೆ ಎಂದು ಹೇಳಿದರು.

ಈ ಹಿಂದೆ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ಅವರು ರಾಮಚರಿತಮಾನಸ ವಿರುದ್ಧ ಹೇಳಿಕೆ ನೀಡಿದ್ದು ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

See also  ಕೇರಳ: ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವ ಹಿನ್ನೆಲೆ ಹಂದಿಗಳ ಸಂಹಾರ ಕಾರ್ಯ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು