ಬಿಜಾಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಮಹಿಳೆ ಸೇರಿದಂತೆ ಮೂವರು ನಕ್ಸಲರನ್ನು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
ಮಿರ್ತುರ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಮ್ರಾ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸುಮಾರು 7.30ಕ್ಕೆ ನಕ್ಸಲರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಐಜಿಪಿ ಸುಂದರ್ ರಾಜ್ ಪಿ ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ಮುಗಿದ ಬಳಿಕ ಘಟನಾ ಸ್ಥಳದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ನಕ್ಸಲರ ಮೃತದೇಹಗಳು ಸಿಕ್ಕಿವೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಸುಂದರ್ ರಾಜ್ ಹೇಳಿದರು.
Chhattisgarh | Three naxals killed in an encounter with CRPF, DRG and STF jawans who were carrying out an anti-naxal operation. The encounter took place in forest area under Mirtur Police Station limits in Bijapur. Arms recovered from the spot: Bijapur SP Anjaneya Varshney
— ANI MP/CG/Rajasthan (@ANI_MP_CG_RJ) November 26, 2022