ನವದೆಹಲಿ : ವಿಷಕಾರಿ ಅನಿಲ ಸೇವಿಸಿ ತಾಯಿ ಮತ್ತು ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ದೆಹಲಿಯ ಶಹದಾರದ ಸೀಮಾಪುರಿಯಲ್ಲಿ ನಡೆದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಶಹದಾರದ ಸೀಮಾಪುರಿ ಪ್ರದೇಶದಲ್ಲಿನ ಅವರ ಮನೆಯೊಳಗೆ ಮಹಿಳೆ ಮತ್ತು ಆಕೆಯ ನಾಲ್ಕು ಮಕ್ಕಳ ಶವಗಳು ಪತ್ತೆಯಾಗಿವೆ. ಸಾವಿನ ಕಾರಣವನ್ನು ಕಂಡುಹಿಡಿಯಲು ಶವಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ’ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.