ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಇಂದು ಹ್ಯಾಕ್ ಮಾಡಲಾಗಿದೆ. ಖಾತೆಯ ಹೆಸರನ್ನು ‘ಐಸಿಜಿ ಓನ್ಸ್ ಇಂಡಿಯಾ’ ಎಂದು ಹ್ಯಾಕರ್ ಗಳು ಬದಲಾಯಿಸಿದ್ದಾರೆ.
ಸ್ಕ್ರೀನ್ ಶಾಟ್ ಗಳಲ್ಲಿ ನೋಡಿದಂತೆ, ಉಕ್ರೇನ್ ಸಹಾಯಕ್ಕಾಗಿ ಕ್ರಿಪ್ಟೋ ದೇಣಿಗೆಗಳನ್ನು ನೀಡುವ ಬಗ್ಗೆ ಕೆಲವು ಟ್ವೀಟ್ ಗಳು ಪ್ರೊಫೈಲ್ ನಲ್ಲಿ ಕಾಣಿಸಿಕೊಂಡಿವೆ. ಖಾತೆಯನ್ನು ಮರಳಿ ಪಡೆದಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಖಾತೆಯಲ್ಲಿ ಹ್ಯಾಕರ್ಸ್ ಮಾಡಿದ್ದಂತ ಟ್ವಿಟ್ ಗಳನ್ನು ಈಗ ಅಳಿಸಿ ಹಾಕಲಾಗಿದೆ.