News Karnataka Kannada
Thursday, March 28 2024
Cricket
ದೆಹಲಿ

ಮುಂದಿನವಾರ ಅಸನಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ

Photo Credit : News Kannada

ನವದೆಹಲಿ : ಮುಂದಿನ ವಾರ ಅಸನಿ ಚಂಡಮಾರುತ  ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹಿಂದೂ ಸಾಗರದಲ್ಲಿ ಕಡಿಮೆ ಒತ್ತಡ ವಾತಾವರಣ ಪರಿಸ್ಥಿತಿ ರಚಿತಗೊಂಡಿದ್ದು, ಚಂಡ ಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇದು ಅಂಡಮಾನ್​-ನಿಕೋಬಾರ್​ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಅಸನಿ ಚಂಡಮಾರುತ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್​​ ಕಡೆಗೆ ಚಲಿಸಲಿದೆ.

ಅಸನಿ ಚಂಡಮಾರುತ ಮಾರ್ಚ್​ 21ರಂದು ತೀವ್ರಗೊಂಡು, ಮಾರ್ಚ್​ 22ರವರೆಗೂ ಉತ್ತರ, ವಾಯುವ್ಯದತ್ತ ಚಲಿಸಲಿದೆ. ಚಂಡ ಮಾರುತ ಉತ್ತರ-ವಾಯುವ್ಯದ ಕಡೆಗೆ ಚಲಿಸಿ ಬಾಂಗ್ಲಾದೇಶದ ಸಮೀಪ ತಲುಪಲಿದೆ. ಮಾರ್ಚ್​ 23ರಷ್ಟರಲ್ಲಿ ಉತ್ತರ ಮ್ಯಾನ್ಮಾರ್​​ ಕರಾವಳಿ ತಲುಪುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿಯ ದಕ್ಷಿಣ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು