NewsKarnataka
Tuesday, October 26 2021

ದೆಹಲಿ

ಸೆ. 1 ರಿಂದ ದೆಹಲಿಯಲ್ಲಿ 9 ರಿಂದ 12 ನೇ ತರಗತಿ ಶಾಲೆ ಆರಂಭ

ನವದೆಹಲಿ,  ;ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಶಾಲೆಗಳ ಭೌತಿಕ ತರಗತಿ
ಬಂದ್ ಮಾಡಲಾಗಿತ್ತು.ಇದೀಗ ದೇಶದ ಒಂದೊಂದೇ ರಾಜ್ಯಗಳು ಭೌತಿಕ ತರಗತಿಗಳನ್ನು
ಆರಂಭಿಸುತ್ತಿವೆ ಅದರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದೆ.ಸೆಪ್ಟೆಂಬರ್ 1 ರಿಂದ 9
ರಿಂದ 12 ತರಗತಿಗಳು ಆರಂಭವಾಗಲಿವೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಿಗಾಗಿ
ಭೌತಿಕ ತರಗತಿಗಳನ್ನು ಆರಂಭಿಸಿದ ನಂತರ ಅದರ ಸಾಧಕ-ಬಾಧಕಗಳನ್ನು ನೋಡಿಕೊಂಡು ಇನ್ನುಳಿದ
ತರಗತಿಗಳನ್ನು ಆರಂಭಿಸಲು ಸರ್ಕಾರಕ್ಕೆ ಸಲಹೆ ನೀಡಿದೆ.ಎಲ್ಲವೂ ಅಂದುಕೊಂಡಂತೆ ಆದರೆ
ಸೆಪ್ಟೆಂಬರ್ 8 ರಿಂದ ಆರರಿಂದ ಎಂಟನೇ ತರಗತಿಯ ಶಾಲೆಗಳ ಭೌತಿಕ ತರಗತಿಗಳು
ಆರಂಭವಾಗಲಿವೆ.ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧಾರ
ತೆಗೆದುಕೊಳ್ಳುವುದಕ್ಕೆ ಮುನ್ನ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅರವಿಂದ
ಕೇಜ್ರಿವಾಲ ಅವರು ಅತಿಶೀಘ್ರದಲ್ಲೇ ಶಾಲೆಗಳನ್ನು ಆರಂಭಿಸುವುದಾಗಿ ಮಾಹಿತಿ
ನೀಡಿದ್ದರು.ಶಾಲಾ ಕಾಲೇಜು ಆರಂಭಿಸುವ ಸಂಬಂಧ ಸಂಬಂಧಿಸಿದ ಕಾಲೇಜುಗಳ ವಿದ್ಯಾರ್ಥಿಗಳು
ಮತ್ತು ಪೋಷಕರ ಬಗ್ಗೆ ಚರ್ಚಿಸಿದ ನಂತರವೇ ತರಗತಿಗಳು ಆರಂಭ ಮಾಡಲಾಗುತ್ತಿದೆ ಎಂದು
ಅವರು ಹೇಳಿದ್ದಾರೆ.
ಸೆಪ್ಟೆಂಬರ್ ಒಂದರಿಂದ 9ರಿಂದ 12ನೇ ತರಗತಿಯ ಭೌತಿಕ ತರಗತಿಗಳು ಆರಂಭವಾಗುತ್ತಿರುವ
ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ದೆಹಲಿ ಸರ್ಕಾರ
ಕೈಗೊಂಡಿದೆ. ಬೌದ್ಧಿಕ ತರಗತಿಗೆ ಹಾಜರಾಗದ ವಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ
ಪೋಷಕರ ಅನುಮತಿ ಪತ್ರ ಪಡೆದಿರಬೇಕು. ಭೌತಿಕ ತರಗತಿಗೆ ಹಾಜರಾಗಲು ಒಪ್ಪದ
ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವು ಶಿಕ್ಷಣ ನೀಡುವ ಪರಿಪಾಠ ನಡೆಯಲಿದೆ ಎಂದು
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!