News Kannada
Monday, December 05 2022

ದೆಹಲಿ

ದೇಶದ ಲಸಿಕಾ ಅಭಿಯಾನ ‘ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ ಮುನ್ನಡೆಸಿದ ಮತ್ತು ವಿಜ್ಞಾನ ಆಧಾರಿತ ಕಾರ್ಯಕ್ರಮವಾಗಿದೆ’ : ಪ್ರಧಾನಿ ಮೋದಿ

Photo Credit :

ನವದೆಹಲಿ : ದೇಶದ ಲಸಿಕಾ ಅಭಿಯಾನ ‘ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ ಮುನ್ನಡೆಸಿದ ಮತ್ತು ವಿಜ್ಞಾನ ಆಧಾರಿತ ಕಾರ್ಯಕ್ರಮವಾಗಿದೆ’ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಭಿಯಾನದ ವೇಗ ಮತ್ತು ಪ್ರಮಾಣ ದೇಶದ ಒಳಗಿನ ಮತ್ತು ದೇಶದ ಹೊರಗಿನ ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದರು.

ಕೋವಿಡ್‌ ವಿರುದ್ಧದ ಲಸಿಕಾ ಅಭಿಯಾನದಲ್ಲಿ ದೇಶವು 100 ಕೋಟಿ ಡೋಸ್‌ಗಳ ಮೈಲಿಗಲ್ಲು ತಲುಪಿದ ಹಿನ್ನೆಲೆಯಲ್ಲಿ ಅವರು ದೇಶವನ್ನು ಉದ್ದೇಶಿಸಿ ಶುಕ್ರವಾರ ಭಾಷಣ ಮಾಡಿದರು. ಲಸಿಕೆಯ ಅಗತ್ಯ ಮತ್ತು ದೇಶದ ಆರ್ಥಿಕತೆ ಕುರಿತು ಆಶಾಭಾವನೆ ಮತ್ತು ಭರವಸೆ ಮೂಡುತ್ತಿರುವ ಕುರಿತು ಮಾತನಾಡಿದರು.

ಈ ಸಾಧನೆ ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದವರ ಬಾಯಿ ಮುಚ್ಚಿಸಿದೆ. ಅಲ್ಲದೇ, ‘ನವ ಭಾರತ’ ಕಷ್ಟಕರ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸುತ್ತದೆ ಎಂಬುದನ್ನು ಈ ಲಸಿಕಾ ಅಭಿಯಾನ ತೋರಿಸಿಕೊಟ್ಟಿದೆ ಎಂದರು.

ಪ್ರತಿಪಕ್ಷಗಳಿಗೆ ತಿರುಗೇಟು: ಪ್ರತಿಪಕ್ಷಗಳ ಟೀಕೆಗಳ ವಿರುದ್ಧ ಹರಿಹಾಯ್ದ ಅವರು, ಚಪ್ಪಾಳೆ ತಟ್ಟುವುದರಿಂದ ಮತ್ತು ದೀಪ ಹಚ್ಚುವುದರಿಂದ ಹೇಗೆ ವೈರಸ್‌ ನಾಶ ಆಗುತ್ತದೆ ಎಂದು ಸಾಂಕ್ರಾಮಿಕದ ಆರಂಭಿಕ ದಿನಗಳಲ್ಲಿ ಟೀಕೆ ಮಾಡುತ್ತಿದ್ದರು. ಈ ಕ್ರಮಗಳು ಜನರ ಭಾಗವಹಿಸುವಿಕೆ ಮತ್ತು ಒಗ್ಗಟ್ಟನ್ನು ತೋರುತ್ತವೆ. 100 ಕೋಟಿ ಡೋಸ್‌ ಲಸಿಕೆ ನೀಡಿರುವುದು ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ ಮತ್ತು ಇದು ದೇಶದ ಸಾಮರ್ಥ್ಯವನ್ನು ಪ್ರತಿಫಲಿಸುತ್ತದೆ. ಭಾರತದ ಲಸಿಕಾ ಅಭಿಯಾನ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ ಮತ್ತು ಸಬ್ ಕಾ ಪ್ರಯಾಸ್‌’ ಘೋಷಣೆಯ ಅತ್ಯಂತ ಪರಿಣಾಮಕಾರಿ ಉದಾಹರಣೆ ಆಗಿದೆ ಎಂದರು.

ಈ ಮೈಲುಗಲ್ಲು ತಲುಪಿದ್ದರಿಂದ ಆಗುವ ಮತ್ತೊಂದು ಮಹತ್ತರ ಪರಿಣಾಮವೇನೆಂದರೆ, ಭಾರತವನ್ನು ಕೊರೊನಾ ವೈರಸ್‌ನಿಂದ ಸುರಕ್ಷಿತ ದೇಶ ಎಂದು ಪರಿಗಣಿಸಲಾಗುತ್ತದೆ. ಔಷಧಿ ತಯಾರಕಾ ವಲಯದಲ್ಲಿ ಭಾರತದ ಸ್ಥಾನ ಜಾಗತಿಕವಾಗಿ ದೊಡ್ಡ ಮಟ್ಟಕ್ಕೇರುತ್ತದೆ ಎಂದರು.

ವಿಐಪಿ ಸಂಸ್ಕೃತಿಗೆ ಜಾಗ ಇಲ್ಲ: ಭಾರತದಂಥ ಪ್ರಜಾಪ್ರಭುತ್ವದಲ್ಲಿ ಕೋವಿಡ್‌ನಂಥ ಸಾಂಕ್ರಾಮಿಕದ ಎದುರು ಹೋರಾಡುವುದು ಬಹಳ ಕಷ್ಟ ಎಂಬ ಆತಂಕಗಳು ಸಾಂಕ್ರಾಮಿಕದ ಆರಂಭದಲ್ಲಿ ವ್ಯಕ್ತವಾಗಿದ್ದವು. ಸಾಂಕ್ರಾಮಿಕ ತಡೆಗೆ ಬೇಕಿರುವ ಶಿಸ್ತನ್ನು ಹೇಗೆ ಜನರಲ್ಲಿ ತರಲಾಗುತ್ತದೆ ಎಂಬ ಕುರಿತೂ ಪ್ರಶ್ನೆಗಳು ಎದ್ದಿದ್ದವು. ನಮಗೆ ಪ್ರಜಾಪ್ರಭುತ್ವ ಎಂದರೆ ‘ಸಬ್‌ ಕಾ ಸಾಥ್‌’. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ನಾವು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಅಭಿಯಾನ ಆರಂಭಿಸಿದೆವು. ಈ ರೋಗ ಹೇಗೆ ಯಾರ ಕುರಿತೂ ತಾರತಮ್ಯ ಮಾಡುವುದಿಲ್ಲವೋ ಅದೇ ರೀತಿ ಲಸಿಕೆ ಹಂಚಿಕೆ ವಿಚಾರದಲ್ಲೂ ನಾವು ತಾರತಮ್ಯ ಮಾಡಬಾರದು ಎಂಬ ಮಂತ್ರ ಇರಿಸಿಕೊಂಡಿದ್ದೆವು, ಹಾಗಾಗಿ ಇಲ್ಲಿ ವಿಐಪಿ ಸಂಸ್ಕೃತಿ ಇರಲಿಲ್ಲ ಎಂದರು.

ಹಬ್ಬಗಳ ಋತುವಿನಲ್ಲಿ ಕೋವಿಡ್‌ ಸಂಬಂಧಿ ಎಚ್ಚರಿಕೆಗಳನ್ನು ಪಾಲಿಸಬೇಕು. ನೀವು ತೆಗೆದುಕೊಂಡಿರುವ ಲಸಿಕೆ ಎಷ್ಟೇ ಉತ್ತಮವಾಗಿರಲಿ ಆದರೆ ಯುದ್ಧ ಮುಗಿಯುವ ವರೆಗೆ ಶಸ್ತ್ರಗಳನ್ನು ಕೆಳಗಿಡಬಾರದು. ಮುಂಜಾಗ್ರತೆ ವಹಿಸಿಯೇ ಹಬ್ಬಗಳನ್ನು ಆಚರಿಸಿ ಎಂದರು.

See also  ಚಳಿಗಾಲದ ಅಧಿವೇಶನ ಕುರಿತು ಮಂತ್ರಿ ಪರಿಷತ್ ಸಭೆಗೆ ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಸ್ಪೀಕರ್‌ ಗೆ ಆಹ್ವಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

One thought on “ದೇಶದ ಲಸಿಕಾ ಅಭಿಯಾನ ‘ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ ಮುನ್ನಡೆಸಿದ ಮತ್ತು ವಿಜ್ಞಾನ ಆಧಾರಿತ ಕಾರ್ಯಕ್ರಮವಾಗಿದೆ’ : ಪ್ರಧಾನಿ ಮೋದಿ

  1. Booster dose corona vaccination shall be introduced. It shall be made voluntary to avoid vaccine loss., immidiately.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು