ಹೊಸದಿಲ್ಲಿ: ಸ್ವತಂತ್ರ ಭಾರತದ 75 ವರ್ಷಗಳ ವೈಭವಯುತ ಪ್ರಯಾಣವನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ. ಮುಂದೆ ಸಾಗುತ್ತಾ ಮುಂದಿನ 75 ವರ್ಷಗಳ ಕಾಲ ದೇಶ ನಿಮ್ಮದು. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಮುನ್ನಡೆ ಸಾಧಿಸುವ ನವ ಭಾರತ, ಬಲಿಷ್ಠ ಭಾರತ ಕನಸು ಕಾಣೋಣ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಚಿಲ್ಡ್ರನ್ ಆಫ್ ನ್ಯೂ ಇಂಡಿಯಾ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಸ್ಮೃತಿ ಇರಾನಿ,‘ನಮ್ಮ ದೇಶದ ಮುಂದಿನ 75 ವರ್ಷಗಳು ನಿಮಗೆ ಸೇರಿದ್ದು. ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಕೊಡುಗೆ ನೀಡಲು ಪ್ರತಿಜ್ಞೆ ತೆಗೆದುಕೊಳ್ಳಿ. ನಿಮ್ಮ ಕನಸುಗಳನ್ನು ಬೆಂಬಲಿಸಲು ಮತ್ತು ಪೂರೈಸಲು ಸಹಾಯ ಮಾಡುವ ನಮ್ಮ ಕರ್ತವ್ಯವನ್ನು ಮುಂದುವರಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ನವ ಭಾರತವನ್ನು ನಿರ್ಮಿಸೋಣ!’ ಎಂದು ಟ್ವೀಟ್ ಮಾಡಿದ್ದಾರೆ.
Dear #ChildrenOfNewIndia,
Next 75 years of our Nation belong to you. Take a pledge to contribute towards a strong & developed nation. Your dreams are ours to support & help fulfil and we will continue to do our duty. Let’s together build a New India!
Regards
A Hopeful Citizen! pic.twitter.com/KB06zPbKJL— Smriti Z Irani (@smritiirani) November 21, 2021