News Kannada
Monday, August 08 2022

ದೆಹಲಿ

ಒಮಿಕ್ರಾನ್ ಕೊರೊನಾ ಸೋಂಕಿನ ಪ್ರಸರಣ ಹಿನ್ನೆಲೆ, ಇಂದು ಮಹತ್ವದ ಸಭೆ ನಡೆಸಿದ ಪ್ರಧಾನ ಮಂತ್ರಿ ಮೋದಿ - 1 min read

ನವದೆಹಲಿ, ನ.27 : ವಿಶ್ವವನ್ನೇ ಕಂಗೆಡಿಸಿರುವ ಹೊಸ ತಳಿಯ ಒಮಿಕ್ರಾನ್ ಕೊರೊನಾ ಸೋಂಕಿನ ಪ್ರಸರಣ ಕೆಲವು ರಾಷ್ಟ್ರಗಳಲ್ಲಿ ತೀವ್ರತೆ ಪಡೆದುಕೊಂಡ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ  ನಡೆಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

ಶನಿವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಅವರು ಹೊಸ ರೂಪಾಂತರ ಸೋಂಕಿನ ಗುಣಲಕ್ಷಣಗಳ ಬಗ್ಗೆ ಮಾಹಿತಿ ಪಡೆದುಕೊಂಡಿದಲ್ಲದೇ ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಸೇರಿದಂತೆ ಏಳು ದೇಶಗಳಲ್ಲಿ ಹೊಸ ತಳಿಯ ಸೋಂಕು ಪತ್ತೆಯಾಗಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ಎಂದು ಹೆಸರಿಟ್ಟಿದೆ. ಹಿಂದಿನ ಎಲ್ಲಾ ಸೋಂಕುಗಳಿಗಿಂತಲೂ ರೂಪಾಂತರಿ ಅತ್ಯಂತ ವೇಗವಾಗಿ ಹರಡಲಿದೆ. ಹಾಲಿ ಲಭ್ಯ ಇರುವ ಲಸಿಕೆಗಳಿಗೆ ಇದು ಜಗ್ಗುವುದಿಲ್ಲ ಎಂಬ ವರದಿ ಇದೆ.

ಈ ಮೊದಲು ಕೋವಿಡ್ ಬಾಧಿತರಾಗಿ ಗುಣಮುಖರಾದವರಿಗೆ ಎರಡನೇ ಬಾರಿ ಸೋಂಕು ತಗುಲಿದರೂ ಹೆಚ್ಚಿನ ಅಪಾಯಗಳಿರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಹೊಸ ರೂಪಾಂತರಿ ಮರುಕಳಿಸುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಅಪಾಯದ ಮಟ್ಟವೂ ಕೂಡ ತೀವ್ರವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಮೊದಲು ಕಾಣಿಸಿಕೊಂಡಿದ್ದ ಡೆಲ್ಟಾ ಸೋಂಕು ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಅದು ನಿರೀಕ್ಷಿತ ಮಟ್ಟದ ಅಪಾಯ ಮಾಡಲಿಲ್ಲ. ಡೆಲ್ಟಾ ತನ್ನಷ್ಟಕ್ಕೆ ತಾನೇ ಕ್ಷೀಣಿಸಿದೆ. ಓಮಿಕ್ರಾನ್ ಸೋಂಕು ಡೆಲ್ಟಾಗಿಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢ ಪಡಿಸಿದೆ. ವಿಶ್ವದಲ್ಲೇ ಲಸಿಕೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್‍ನಲ್ಲೂ ಓಮಿಕ್ರಾನ್‍ನ ಆತಂಕ ಮನೆ ಮಾಡಿದೆ. ವಿಶ್ವದ 27 ರಾಷ್ಟ್ರಗಳು ಈಗಾಗಲೇ ಸ್ವಯಂ ನಿರ್ಬಂಧ ವಿಧಿಸಿಕೊಂಡಿವೆ.ವಿಮಾನ ಪ್ರಯಾಣ, ವ್ಯಾಪಾರ ವಹಿವಾಟುಗಳಲ್ಲಿ ನಿರ್ಬಂಧಗಳನ್ನು ಮರು ಜಾರಿಗೊಳಿಸಲಾಗುತ್ತಿದೆ.

ರೂಪಾಂತರಿ ಸೋಂಕು ಪೀಡಿತ ಏಳು ರಾಷ್ಟ್ರಗಳಿಂದ ಪ್ರವಾಸಿಗರ ಆಗಮನಕ್ಕೆ ಅಮೆರಿಕಾ ತಡೆ ನೀಡಿದೆ. ಅಮೆರಿಕಾದ ನಿವಾಸಿಗಳು ಮರಳಲು ಅವಕಾಶ ನೀಡಲಾಗಿದೆ. ಆದರೆ ದೇಶಕ್ಕೆ ಮರಳಿದ ಬಳಿಕ ಕ್ವಾರಂಟೈನ್ ಕಡ್ಡಾಯ. ನೆಗೆಟಿವ್ ವರದಿಯ ಬಳಿಕವಷ್ಟೇ ಮುಖ್ಯವಾಹಿನಿಗೆ ಸೇರಲು ಅವಕಾಶವಿದೆ ಎಂದು ಶ್ವೇತ ಭವನ ತಿಳಿಸಿದೆ.

ಅಮೆರಿಕಾ, ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಅನೇಕ ದೇಶಗಳು ನಿರ್ಬಂಧಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಭಾರತವೂ ಮುನ್ನೆಚ್ಚರಿಕೆ ಕೈಗೊಂಡಿದೆ. ದೇಶದಲ್ಲಿ ಜನ ಈಗಾಗಲೇ ಕೋವಿಡ್ ಶಿಷ್ಠಾಚಾರಗಳನ್ನು ನಿರ್ಲಕ್ಷ್ಯಿಸಿ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ವ್ಯಕ್ತಿಗತ ಅಂತರ ಪಾಲನೆ, ಮಾಸ್ಕ್ ಧಾರಣೆ ಕಡೆಗಣಿಸಲಾಗಿದೆ. ಚುನಾವಣೆ, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ.

ಈ ಹಂತದಲ್ಲಿ ಓಮಿಕ್ರಾನ್ ಕಾಲಿಲಟ್ಟರೆ ಮತ್ತೆ ಎರಡನೇ ಅಲೆಯಲ್ಲಿ ನಡೆದ ಅನಾವುತಗಳು ಪುನಾರಾವರ್ತನೆಯಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತ ಪಡಿಸಿದ್ದಾರೆ. ಓಮಿಕ್ರಾನ್ ರೋಗ ಲಕ್ಷಣಗಳನ್ನು ತೋರಿಸದೆ ಏಕಾಏಕಿ ಆವರಿಸಿಕೊಳ್ಳಲಿದ್ದು, ಅದನ್ನು ಗುರುತಿಸುವ ವೇಳೆಗೆ ಅಪಾಯಕಾರಿ ಮಟ್ಟ ತಲುಪಿರುತ್ತದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಮಾತ್ರ ಸೋಂಕನ್ನು ನಿಖರವಾಗಿ ಗುರುತಿಸಲು ಸಾಧ್ಯ ಎಂದು ಅದರ ತವರೂರು ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ.

See also  ಒಮಿಕ್ರಾನ್ ಗಿಂತಲೂ ಪ್ರಬಲವಾದ ತಳಿ ಪತ್ತೆ ಮಾಡಿದ ಫ್ರಾನ್ಸ್​ನ ವಿಜ್ಞಾನಿಗಳು

ಹೀಗಾಗಿ ಭಾರತದಲ್ಲಿ ತಕ್ಷಣದಿಂದಲೇ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸುವ ಸಾಧ್ಯತೆ ಇದೆ. ಜೊತೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಇಂದಿಗೆ ದೇಶದಲ್ಲಿ 120 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಬಾಕಿ ಉಳಿದವರು ಲಸಿಕೆ ಪಡೆಯಬೇಕು. ಇದರಿಂದ ಕೋವಿಡ್ ಸೋಂಕು ತಗುಲಿದಾಗ ಕ್ಲಿನಿಕಲ್ ಅಪಾಯಗಳು ಮತ್ತು ಮರಣದ ಪ್ರಮಾಣ ತಗ್ಗಲಿದೆ ಎಂಬುದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕಿದೆ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು