News Kannada
Saturday, April 01 2023

ದೆಹಲಿ

ದೆಹಲಿ: ಭಾರತದಲ್ಲಿ 5ನೇ ಓಮಿಕ್ರಾನ್ ಕೇಸ್ ಪತ್ತೆ

Photo Credit :

ನವದೆಹಲಿ: ಭಾರತದಲ್ಲಿ ಓಮಿಕ್ರಾನ್​ ರೂಪಾಂತರ ಸೋಂಕಿನ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5ನೇ ಪ್ರಕರಣ​ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಸೋಂಕಿತನನ್ನು ಎಲ್​​ಎನ್​​ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇವರು ತಾಂಜಾನಿಯದಿಂದ ಬಂದವರಾಗಿದ್ದರೆಂದು ತಿಳಿದುಬಂದಿದೆ. ಇದರ ಜೊತೆಗೆ ಇನ್ನೂ 17 ಮಂದಿಯಲ್ಲಿ ಕೊವಿಡ್​ 19 ಸೋಂಕು ಕಾಣಿಸಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಮಾಹಿತಿ ನೀಡಿದ್ದಾರೆ.

ಈ ಮೂಲಕ ದೆಹಲಿಯಲ್ಲಿ ಮೊದಲನೇ ಓಮಿಕ್ರಾನ್​ ಪ್ರಕರಣ ಪತ್ತೆಯಾದಂತಾಗಿದೆ.ಇದೂವರೆಗೆ ಕರ್ನಾಟಕದಲ್ಲಿ 2, ಗುಜರಾತ್​ನಲ್ಲಿ ಒಂದು ಪ್ರಕರಣ, ಮುಂಬೈನಲ್ಲಿ 1 ಓಮಿಕ್ರಾನ್​ ಕೇಸ್​ ದೃಢಪಟ್ಟಿತ್ತು. ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಇನ್ನೊಂದು ಕೇಸ್​ ಪತ್ತೆಯಾಗಿದ್ದು, ದೇಶದಲ್ಲಿ ಹೊಸ ರೂಪಾಂತರಿ ತಳಿಯ ಕೇಸ್​ಗಳು 5ಕ್ಕೆ ಏರಿಕೆ ಕಂಡಿವೆ.

ಓಮಿಕ್ರಾನ್​ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಮುನ್ನೆಚ್ಚರಿಕೆ ವಹಿಸಿದೆ. ಈ ಸೋಂಕು ಅಷ್ಟೊಂದು ಮಾರಣಾಂತಿಕವಲ್ಲದೆ ಇದ್ದರೂ, ಮೂರನೇ ಅಲೆ ಉಂಟು ಮಾಡುವಷ್ಟು ಪ್ರಸರಣ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಭಾರತದಲ್ಲೂ ಕೂಡ ಓಮಿಕ್ರಾನ್​ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

See also  ದೇಶದಲ್ಲಿ ಕೊರೋನಾ ಏರಿಳಿತ : ಒಂದೇ ದಿನ 42,625 ಮಂದಿಗೆ ಸೋಂಕು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು