ನವದೆಹಲಿ : ಪತ್ನಿಯ ಅನುಮತಿ ಇಲ್ಲದೆ ಪತಿ ತನ್ನ ಫೋನ್ ಕರೆಗಳನ್ನು ರೆಕಾರ್ಡ್ ಮಾಡುವುದು ಗೌಪ್ಯತೆಯ ಹಕ್ಕಿನ ಉಲ್ಲಂಘನೆ , ಸಂಗಾತಿಯ ಒಪ್ಪಿಗೆ ಇಲ್ಲದೆಯೇ ಆಕೆಯ ಕಾಲ್ ರೆಕಾರ್ಡ್ನ್ನು ಪರಿಶೀಲಿಸುವುದು ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಎಂದು ಪಂಜಾಬ್ ಮತ್ತು ಹರಿಯಾಣ ಜಂಟಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಂಜಾಬ್ ನ ಭಟಿಂಡಾದ ವ್ಯಕ್ತಿಯೊಬ್ಬ ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಬಳಿ ಬಂದು ಪತ್ನಿ ತನಗೆ ಕಿರುಕುಳ ಮಾಡುತ್ತಿದ್ದಳು ಎಂದು ಹೇಳಿದ್ದಾನೆ. ಅವರು ಸಾಕ್ಷ್ಯವಾಗಿ ಫೋನ್ ಸಂಭಾಷಣೆಗಳನ್ನು ಸಲ್ಲಿಸಿದರು. ಆದರೆ ಈ ಪ್ರಕರಣ ವು ಮತ್ತೊಂದು ತಿರುವು ಪಡೆದದ್ದು ಇಲ್ಲಿಯೇ. ಸಾಕ್ಷ್ಯಗಳ ಬಗ್ಗೆ ಪತ್ನಿ ಅಸಮಾಧಾನ ವ್ಯಕ್ತಪಡಿಸಿದ್ದಳು. ಅನುಮತಿ ಯಿಲ್ಲದೆ ರೆಕಾರ್ಡಿಂಗ್ ವಿರುದ್ಧ ಪತ್ನಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಪತ್ನಿಯ ಅನುಮತಿ ಇಲ್ಲದೆ ಪತಿ ತನ್ನ ಫೋನ್ ಕರೆಗಳನ್ನುರೆಕಾರ್ಡ್ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.
ವಿಚ್ಚೇದನ ಪ್ರಕರಣ ಕುರಿತಂತೆ ಆರು ತಿಂಗಳ ಒಳಗಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಬಂಟಿಂಡಾ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗೂ ಫೋನ್ ರೆಕಾರ್ಡಿಂಗ್ನ್ನು ಯಾವುದೇ ಕಾರಣಕ್ಕೂ ಸಾಕ್ಷ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಎರಡೂ ವಾದಗಳನ್ನು ಪರಿಗಣಿಸಿ, ಫೋನ್ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು. ಇದರ ಜೊತೆಗೆ ಪತ್ನಿಯ ಅನುಮತಿ ಇಲ್ಲದೆ, ತನಗೆ ಗೊತ್ತಿಲ್ಲದಂತೆ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವುದು ಅಪರಾಧ ಎಂದು ಪಂಜಾಬ್-ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.