News Kannada
Sunday, October 02 2022

ದೆಹಲಿ

ಮುಂದಿನ 6 ತಿಂಗಳಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುವುದು : ಸೀರಂ ಇನ್‌ಸ್ಟಿಟ್ಯೂಟ್‌ - 1 min read

Photo Credit :

ನವದೆಹಲಿ : ಮುಂದಿನ 6 ತಿಂಗಳಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದರ್ ಪೂನಾವಾಲಾ ತಿಳಿಸಿದ್ದಾರೆ.

ಮಕ್ಕಳ ವಿಷಯದಲ್ಲಿ ಆತಂಕದ ಪರಿಸ್ಥಿತಿ ಈಗ ಇಲ್ಲ, ಆದರೂ, ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುವ ಲಸಿಕೆಯನ್ನು ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಕೊವೊವ್ಯಾಕ್ಸ್ ಲಸಿಕೆಯು ಸದ್ಯ ಪ್ರಯೋಗ ಹಂತದಲ್ಲಿದೆ, ಇದು ಮಕ್ಕಳಿಗೆ ಮೂರು ವರ್ಷದವರೆಗೂ ರಕ್ಷಣೆ ಒದಗಿಸಲಿದೆ ಎಂದರು.

ಲಸಿಕೆ ಪರಿಣಾಮಕಾರಿ ಹಾಗೂ ಮಕ್ಕಳಿಗೆ ಸೋಂಕಿನ ವಿರುದ್ಧ ರಕ್ಷಣೆ ಒದಗಿಸಲಿದೆ ಎಂಬುದಕ್ಕೆ ಪೂರಕ ಅಂಕಿ ಅಂಶಗಳು ಲಭ್ಯವಿದೆ. ಮಕ್ಕಳಿಗೆ ಲಸಿಕೆ ಕೊಡಿಸಬೇಕು, ಇವುಗಳಿಂದ ಅಡ್ಡಪರಿಣಾಮಗಳಿಲ್ಲ, ಸರ್ಕಾರ ಈ ಕುರಿತು ಹೊರಡಿಸಿರುವ ಪ್ರಕಟಣೆ ಆಧರಿಸಿ, ಅದರಂತೆಯೇ ಕ್ರಮಕೈಗೊಳ್ಳಿ ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ.

ಕೋವಿಡ್‌ನ ರೂಪಾಂತರಿಯಾಗಿರುವ ಓಮಿಕ್ರಾನ್ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂದು ಈಗಾಲೇ ಹೇಳಲಾಗದು, ಆದರೆ ಗಂಭೀರ ಪರಿಣಾಮ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

See also  ನಕಲಿ ಕಾಲ್‌ ಸೆಂಟರ್‌ ತೆರೆದು ಅಮೇರಿಕ ನಾಗರಿಕರಿಗೆ ವಂಚಿಸುತಿದ್ದ 65 ಜನರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು