News Kannada
Friday, September 30 2022

ದೆಹಲಿ

ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಹೆಸರು ಶಿಫಾರಸು - 1 min read

Photo Credit : News Kannada

ನವದೆಹಲಿ ಫೆ. 2 : ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಜಿಲ್ಲೆಯ ಮೂಲದ ವಕೀಲ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಅವರ ಹೆಸರು ಪರಿಗಣಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಮತ್ತೊಮ್ಮೆ ಶಿಫಾರಸು ಮಾಡಿದೆ. ಮಂಗಳವಾರದಂದು ನವದೆಹಲಿಯಲ್ಲಿ ನಡೆದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಿ ಎಂ ಪೂಣಚ್ಚ ಅವರ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ 2021ರ ಅಕ್ಟೋಬರ್​ನಲ್ಲಿಯೇ ಮೊದಲ ಬಾರಿಗೆ ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು. ಆಗ ಶಿಫಾರಸು ಪರಿಗಣಿಸದ ಕೇಂದ್ರ ಸರ್ಕಾರ, ಕಡತವನ್ನು ಕೊಲಿಜಿಯಂಗೆ ಹಿಂದಿರುಗಿಸಿತ್ತು. ಇದೀಗ ಮತ್ತೊಮ್ಮೆ ಪೂಣಚ್ಚ ಅವರ ಹೆಸರನ್ನು ಪರಿಗಣಿಸುವಂತೆ ಕೊಲಿಜಿಯಂ ಶಿಫಾರಸು ಮಾಡಿದ್ದು ಅವರು ನ್ಯಾಯಮೂರ್ತಿ ಹುದ್ದೆಗೆ ಏರಲಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ರಾಜ್ಯ ಹೈಕೋರ್ಟ್​ನಲ್ಲಿ ಮಂಜೂರಾಗಿರುವ 62 ನ್ಯಾಯಮೂರ್ತಿ ಹುದ್ದೆಗಳ ಪೈಕಿ 45 ನ್ಯಾಯಮೂರ್ತಿಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 17 ಹುದ್ದೆಗಳು ಕೆಲ ಸಮಯದಿಂದ ಖಾಲಿ ಇವೆ. ಮೊಣ್ಣಪ್ಪ ಪೂಣಚ್ಚ ಅವರು ಸಿದ್ದಾಪುರ ಸಮೀಪದ ನೋಕ್ಯ ಗ್ರಾಮದವರಾಗಿದ್ದು ಇವರ ತಂದೆ ದಿವಂಗತ ಸಿ ಎಂ ಮೊಣ್ಣಪ್ಪ ಕೂಡ ಖ್ಯಾತ ವಕೀಲರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. 2001 ರಲ್ಲಿ ಬೆಂಗಳೂರಿನಲ್ಲಿ ಖ್ಯಾತ ವಕೀಲ ಎಸ್‌ ಕೆ ವಿ ಚಲಪತಿ ಅವರ ಜೂನಿಯರ್‌ ಆಗಿ ವಕೀಲ ವೃತ್ತಿ ಆರಂಬಿಸಿದ ಪೂಣಚ್ಚ ಅವರು ನಂತರ ತಮ್ಮ ತಂದೆಯ ಕೈ ಕೆಳಗೆ ಕೆಲಸ ಮಾಡಿದ್ದರು.

ಕುಟುಂಬದ ವಲಯದಲ್ಲಿ ನಯನ್‌ ಎಂದು ಕರೆಯಲ್ಪಡುವ ಪೂಣಚ್ಚ 2020 ರ ಆಗಸ್ಟ್‌ ನಿಂದ ರಾಜ್ಯ ಹೈ ಕೋರ್ಟ್‌ ನಲ್ಲಿ ಹೆಚ್ಚುವರಿ ಸರ್ಕಾರೀ ವಕೀಲರಾಗಿ ಸೇವೆ ಸಲ್ಲಿಸುತಿದ್ದರು. ಡಾ ಕಂಜಿತಂಡ ಚಿನ್ನಪ್ಪ ಅವರ ಪುತ್ರಿ ವಕೀಲೆ ಸವಿತಾ ಅವರನ್ನು ವಿವಾಹವಾಗಿರುವ ಈ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದು ಓರ್ವ ಮಗ ಮತ್ತು ಓರ್ವ ಮಗಳನ್ನು ಹೊಂದಿದ್ದಾರೆ. ಜಿಲ್ಲೆಯ ಮೂಲದ ಮತ್ತೋರ್ವ ಪ್ರಮುಖರಾದ ಅಜ್ಜಿಕುಟ್ಟೀರ ಎಸ್‌ ಬೋಪಣ್ಣ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತಿದ್ದಾರೆ.

See also  ಪಂಜಾಬ್ ವಿಧಾನಸಭಾ ಚುನಾವಣೆ: ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಹೆಸರು ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1620
Coovercolly Indresh

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು