ಇಂದು ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 105 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ರಾಷ್ಟ್ರರಾಜಧಾನಿಯಲ್ಲಿ ಇನ್ನು ಮುಂದೆ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 2012 ರೂಪಾಯಿ.
ಇದರೊಂದಿಗೆ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 27ರೂಪಾಯಿ ಹೆಚ್ಚಾಗಿದ್ದು, ದೆಹಲಿಯಲ್ಲಿ 5ಕೆಜಿ ಸಿಲಿಂಡರ್ ಬೆಲೆ 569ರೂ.ಗೆ ಏರಿಕೆಯಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಫೆಬ್ರವರಿಯಲ್ಲಿ ರಾಷ್ಟ್ರೀಯ ತೈಲು ಮಾರುಕಟ್ಟೆ ಕಂಪನಿಗಳು 91.50ರಷ್ಟು ಕಡಿತಗೊಳಿಸಿದ್ದವು.
ಜನವರಿಯಲ್ಲೂ ಕೂಡ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 102.50 ರೂಪಾಯಿ ಕಡಿತಗೊಂಡಿತ್ತು. ಅಲ್ಲಿಯವರೆಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಸತತವಾಗಿ ಏರಿಕೆಯಾಗುತ್ತಿತ್ತು. ಹೀಗಾಗಿ ರೆಸ್ಟೋರೆಂಟ್ಗಳು, ಹೋಟೆಲ್ಗಳು, ಉಪಾಹಾರ ಗೃಹಗಳ ಮಾಲೀಕರಿಗೆ ಕೊಂಚ ಹೊರೆ ತಗ್ಗಿತ್ತು. ಆದರೆ ಇಂದು ಮತ್ತೆ ದೆಹಲಿಯಲ್ಲಿ 105 ರೂ. ಏರಿಕೆಯಾಗಿದ್ದು, ವಿವಿಧ ಮಹಾನಗರಗಳಲ್ಲೂ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.