News Kannada
Tuesday, November 29 2022

ದೆಹಲಿ

ದಿನಬಳಕೆ ಗ್ರಾಹಕ ಉತ್ಪನ್ನಗಳ ಬೆಲೆ ಶೇ.10 ತುಟ್ಟಿ ಸಾಧ್ಯತೆ! - 1 min read

Photo Credit :

ನವದೆಹಲಿ: ಬೆಲೆ ಏರಿಕೆ ಆಘಾತದಿಂದ ಈಗಾಗಲೇ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಮತ್ತೊಂದು ಸುತ್ತಿನ ದುಬಾರಿ ಬರೆ ಬೀಳುವುದು ಖಚಿತವಾಗಿದೆ. ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ಶೇ.10ರಷ್ಟು ತುಟ್ಟಿಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ.

ಸಗಟು ಮತ್ತು ಚಿಲ್ಲರೆ ಮಾರಾಟ ಹಣದುಬ್ಬರದ ದರ ಏರಿಕೆಯ ಪರಿಣಾದಿಂದಾಗಿ, ದಿನಬಳಕೆಯ ವಸ್ತುಗಳು ಶೀಘ್ರವೇ ಬಿಕರಿಯಾಗುವ ಸಾಧ್ಯತೆ ಇದೆ.

ಗ್ರಾಹಕ ಸರಕುಗಳ ಬೆಲೆಯನ್ನು ಶೇ.10ರಷ್ಟು ಹೆಚ್ಚಿಸೋದಕ್ಕೆ ತಯಾರಿಕಾ ಕಂಪನಿಗಳು ಮುಂದಾದ ಕಾರಣ, ಶೀಘ್ರವೇ ದಿನ ಬಳಕೆ ಗ್ರಾಹಕರ ಉತ್ಪನ್ನಗಳ ಬೆಲೆ ದುಬಾರಿಯಾಗಲಿದೆ.

ಅಂದಹಾಗೇ ಈಗಾಗಲೇ ಕೆಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೇ, ಇನ್ನೂ ನೆಸ್ಲೆ ಕಂಪನಿ, ಹೆಚ್ ಯು ಎಲ್, ಕಾಫಿ, ಟೀ ಉತ್ಪನ್ನಗಳ ಬೆಲೆಯನ್ನು ಕಳೆದ ವಾರವೇ ಶೇ.9 ರಿಂದ 16ರಷ್ಟು ಹೆಚ್ಚು ಮಾಡಿವೆ. ಶೇ.10 ರಿಂದ 15ರಷ್ಟು ದರ ಏರಿಕೆ ಸುಳಿವನ್ನು ಪಾರ್ಲೆ ಕಂಪನಿ ನೀಡಿದೆ. ಇದಲ್ಲದೇ ಇತರೆ ದಿನ ಬಳಕೆ ವಸ್ತುಗಳ ಶೇ.10ರಷ್ಟು ದರ ಏರಿಕೆ ಸಾಧ್ಯತೆ ಇದ್ದು, ಈ ಮೂಲಕ ಜನರಿಗೆ ಬಿಗ್ ಶಾಕ್ ನೀಡಲಿದೆ.

See also  ದೇಶದಲ್ಲಿ 24 ಗಂಟೆಯಲ್ಲಿ 83,876 ಜನರಲ್ಲಿ ಸೋಂಕು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು