News Kannada
Thursday, December 01 2022

ದೆಹಲಿ

ಗ್ರೀನ್ ಹೈಡ್ರೋಜನ್ ಕಾರಿನಲ್ಲಿ ಸಂಸತ್ ಗೆ ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

Photo Credit : Twitter

ನವದೆಹಲಿ : ದಿನಂಪ್ರತಿ ತೈಲ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಸಾರ್ವಜನಿಕರು ಅಸಮಧಾನವ್ಯಕ್ತಪಡಿಸುತ್ತಿರುವ ನಡುವೆಯೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ (ಮಾರ್ಚ್ 30) ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ ಗೆ ಆಗಮಿಸಿದ್ದಾರೆ.

ಪ್ರಾಯೋಗಿಕವಾಗಿ ದೇಶದ ಮೊಟ್ಟ ಮೊದಲ ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನ್ನು ತಮ್ಮ ಮನೆಯಿಂದ ಸಂಸತ್ ಭವನದವರೆಗೆ ಚಲಾಯಿಸಿಕೊಂಡು ಬಂದಿರುವುದಾಗಿ ವರದಿ ವಿವರಿಸಿದೆ.

ಟೊಯೊಟೊ ಮಿರ್ರೈ ವಾಹನವು ಹೈಡ್ರೋಜನ್ ಇಂಧನ ಸೆಲ್ ಬ್ಯಾಟರಿ ಪ್ಯಾಕ್ ನಿಂದ ಚಾಲಿತವಾಗಿದ್ದು, ಇದು ಒಂದು ಗಂಟೆಯ ಚಾರ್ಜ್ ನಲ್ಲಿ 600 ಕಿಲೋ ಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಪ್ರತಿ ಕಿಲೋ ಮೀಟರ್ ಸಂಚಾರಕ್ಕೆ ಕೇವಲ 2 ರೂಪಾಯಿ ವೆಚ್ಚವಾಗಲಿದೆ.

ಇದು ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ಚಾಲಿತ ಕಾರು ಇದಾಗಿದ್ದು, ಈ ಕಾರಿನ ವೈಶಿಷ್ಟ್ಯತೆಯನ್ನು ತಿಳಿಸುವ ನಿಟ್ಟಿನಲ್ಲಿ ಸಂಸತ್ ಗೆ ಆಗಮಿಸಿರುವುದಾಗಿ ಸಚಿವ ಗಡ್ಕರಿ ಮಾಹಿತಿ ನೀಡಿದ್ದಾರೆ.

ನಿತಿನ್ ಗಡ್ಕರಿಯವರು ಹೈಡ್ರೋಜನ್ ಕಾರಿನ ಚಾಲಕನ ಪಕ್ಷ ಕುಳಿತಿದ್ದು, ಕಾರು ಬಿಳಿ ಬಣ್ಣದ್ದಾಗಿದೆ. ಹಸಿರು ನಂಬರ್ ಪ್ಲೇಟ್ ಬಳಕೆ ಮಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಖುದ್ದಾಗಿ ತಾವೇ ಹೈಡ್ರೋಜನ್ ಕಾರನ್ನು ಬಳಕೆ ಮಾಡುವುದಾಗಿ ನಿತಿನ್ ಗಡ್ಕರಿ ಜನವರಿಯಲ್ಲಿ ಘೋಷಿಸಿದ್ದರು. ಜಪಾನ್ ನ ಟೋಯೊಟಾ ಕಂಪನಿ ನನಗೆ ಸಂಚರಿಸಲು ಗ್ರೀನ್ ಹೈಡ್ರೋಜನ್ ಕಾರನ್ನು ನೀಡಿದ್ದು, ತೈಲ ಬಳಕೆ ಬದಲು ಪೈಲಟ್ ಪ್ರಾಜೆಕ್ಟ್ ಭಾಗವಾಗಿ ಈ ಹೈಡ್ರೋಜನ್ ಕಾರನ್ನು ಬಳಸುವುದಾಗಿ ಸಚಿವ ಗಡ್ಕರಿ ತಿಳಿಸಿದ್ದರು.

See also  ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು