News Kannada
Tuesday, September 27 2022

ದೆಹಲಿ

ಟ್ವಿಟರ್ ಮಂಡಳಿ ಸೇರಲು ಎಲಾನ್ ಮಸ್ಕ್ ನಿರಾಕರಣೆ: ಟ್ವಿಟರ್ ಸಿಇಒ - 1 min read

Photo Credit :

ನವದೆಹಲಿ : ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಶೇ 9.2ರಷ್ಟು ಷೇರು ಖರೀದಿಸಿ ಸುದ್ದಿಯಾಗಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್ ಮಂಡಳಿ ಸೇರಲು ನಿರಾಕರಿಸಿದ್ದಾರೆಂದು ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರು ಸೋಮವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪರಾಗ್ ಅವರು, ಎಲಾನ್ ಅವರು ಟ್ವಿಟರ್ ಮಂಡಳಿ ಸೇರದೇ ಇರಲು ನಿರ್ಧರಿಸಿದ್ದಾರೆ. ಆದರೆ ಟ್ವಿಟ್ಟರ್ ಅನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರೂ ಸಹ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಎಲಾನ್ ನಮ್ಮ ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರ ಸಲಹೆ ಸೂಚನೆಗಳಿಗೆ ನಾವು ಮುಕ್ತವಾಗಿರುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಮಂಡಳಿಗೆ ಸೇರದಿರಲು ಎಲಾನ್ ಮಸ್ಕ್ ನಿರ್ಧರಿಸಿದ್ದಾರೆ. ಅಸಲಿಗೆ ಏನಾಯಿತು ಎಂಬುದರ ಕುರಿತು ನಾನು ಇಲ್ಲಿ ಹಂಚಿಕೊಳ್ಳುತ್ತೇನೆ. ಮಂಡಳಿಗೆ ಎಲಾನ್ ಸೇರ್ಪಡೆಯ ಬಗ್ಗೆ ನಾನು ಮತ್ತು ಅವರ ಜೊತೆ ಅನೇಕ ಬಾರಿ ನೇರವಾಗಿ ಚರ್ಚಿಸಿದ್ದೇನೆ. ಅಪಾಯವನ್ನು ನಿವಾರಿಸಿ ಸಹಕಾರ ನೀಡುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಎಲ್ಲಾ ಮಂಡಳಿಯ ಸದಸ್ಯರಂತೆ ಅವರು ಕಂಪನಿಯ ಮತ್ತು ನಮ್ಮ ಎಲ್ಲಾ ಷೇರುದಾರರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ಕಂಪನಿಯ ವಿಶ್ವಾಸಾರ್ಹರಾಗಿ ಎಲಾನ್ ಅವರನ್ನು ಹೊಂದಿರುವುದು ಉತ್ತಮ ಮಾರ್ಗವಾಗಿದೆ ಎಂದು ನಾವು ನಂಬಿದ್ದೇವೆ. ಈ ಹಿನ್ನೆಲೆ ಮಂಡಳಿಯಲ್ಲಿ ಅವರಿಗೊಂದು ಸ್ಥಾನವನ್ನು ನೀಡಲು ಬಯಸಿದ್ದೆವು,

ಟ್ವಿಟ್ಟರ್ ಮಂಡಳಿಗೆ ಎಲಾನ್ ಮಸ್ಕ್ ಸೇರ್ಪಡೆಯಿಂದ ಅಧಿಕೃತವಾಗಿ 4/9 ಪರಿಣಾಮಕಾರಿ ಆಗಬೇಕಿತ್ತು, ಆದರೆ ಅದೇ ದಿನ ಬೆಳಗ್ಗೆ ಎಲಾನ್ ಅವರು ತಾವು ಮಂಡಳಿಗೆ ಸೇರುವುದಿಲ್ಲ ಎಂದು ಘೋಷಿಸಿದರು. ಇದು ಅತ್ಯುತ್ತಮವಾದ ಬೆಳವಣಿಗೆ ಎಂದು ನಾನು ನಂಬುತ್ತೇನೆ. ನಮ್ಮ ಷೇರುದಾರರು ನಮ್ಮ ಬೋರ್ಡ್‌ನಲ್ಲಿದ್ದರೂ, ಇಲ್ಲದಿದ್ದರೂ ನಾವು ಯಾವಾಗಲೂ ಅವರ ಸಲಹೆ ಸೂಚನೆಗಳು ಮೌಲ್ಯಯುತವಾಗಿರುತ್ತೇವೆ. ಎಲಾನ್ ನಮ್ಮ ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರ ಅಭಿಪ್ರಾಯಗಳನ್ನು ನಾವು ಮುಕ್ತವಾಗಿ ಸ್ವೀಕರಿಸುತ್ತೇವೆ ಎಂದು ತಿಳಿಸಿದ್ದಾರೆ.

See also  ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತ: 2,288 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು