News Kannada
Monday, January 30 2023

ದೆಹಲಿ

ನೀಟ್‌ ಪರೀಕ್ಷೆ ಮುಂದೂಡುವಂತೆ ಭಾರತೀಯ ವೈದ್ಯಕೀಯ ಸಂಘದಿಂದ ಮನವಿ

Photo Credit :

ದೆಹಲಿ: ನೀಟ್‌ ಪರೀಕ್ಷೆ ಮುಂದೂಡುವಂತೆ ಭಾರತೀಯ ವೈದ್ಯಕೀಯ ಸಂಘವು ಮಾಡಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಅವರಿಗೆ ಪತ್ರ ಬರೆದಿದ್ದು ಮೇ 21 ರಂದು ನಡೆಯಲಿರುವ ನೀಟ್ ಪಿಜಿ ಪರೀಕ್ಷೆಯನ್ನು ಮರು ನಿಗದಿಪಡಿಸುವಂತೆ ಪತ್ರದಲ್ಲಿ ಕೋರಿಕೊಂಡಿದೆ.

2021ರ ಕೌನ್ಸೆಲಿಂಗ್‌ ಮತ್ತು ನೀಟ್‌ ಪಿಜಿ2022 ರ ನಡುವೆ ಇರುವ ಅವಧಿಯು ತುಂಬಾ ಚಿಕ್ಕದಾಗಿದ್ದು ಪರೀಕ್ಷಾರ್ಥಿಗಳಿಗೆ ಅತ್ಯಂತ ಕಷ್ಟದ ಪರೀಕ್ಷೆಯಾದ ನೀಟ್‌ ಗೆ ತಯಾರಿ ನಡೆಸಲು ಕಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಮಾಡಿದೆ.

ಕೋವಿಡ್‌-19ರ ಕಾರಣದಿಂದಾಗಿ ನಿಗದಿತ ದಿನಾಂಕಕ್ಕಿಂತ ಐದು ತಿಂಗಳು ತಡವಾಗಿ ನೀಟ್‌ ಪಿಜಿ-2021ನ್ನು ನಡೆಸಲಾಗಿದೆ. ಅಕ್ಟೋಬರ್‌ ನಲ್ಲಿ ಪ್ರಾರಂಭವಾಗ ಬೇಕಿದ್ದ ಕೌನ್ಸೆಲಿಂಗ್‌ ಜನವರಿಯಲ್ಲಿ ಪ್ರಾರಂಭವಾಯಿತು. ಪ್ರಸ್ತುತ ಮೇ 21 ಕ್ಕೆ 2022ರ ನೀಟ್‌ ಪರೀಕ್ಷೆ ನಿಗದಿಯಾಗಿದೆ. ಇದು ಪರೀಕ್ಷಾರ್ಥಿಗಳಿಗೆ ಕಷ್ಟವಾಗುತ್ತದೆ.

COVID-19 ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ಯೋಧರಾಗಿ ಸೇವೆ ಸಲ್ಲಿಸಿದ ಐದರಿಂದ ಹತ್ತು ಸಾವಿರ ಇಂಟರ್ನ್‌ಗಳು, ತಮ್ಮ ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿರುವುದರಿಂದ ಅವರು ಪರೀಕ್ಷೆಗೆ ಹಾಜರಾಗಲು ಅನರ್ಹರಾಗಿದ್ದಾರೆ. ಇದು ಲಕ್ಷಗಟ್ಟಲೇ ವೈದ್ಯಕೀಯ ಪದವೀಧರರ ವೃತ್ತಿ ಮಾರ್ಗಗಳಿಗೆ ಸಂಬಂಧಿಸಿದೆ. ಆದ ಕಾರಣ ಆರೋಗ್ಯ ಸಚಿವರು ಈ ಕುರಿತು ಗಮನ ಹರಿಸಿ ವಿದ್ಯಾರ್ಥಿಗಳ ಮತ್ತು ಸಾಮಾಜಿಕ ಹಿತ ದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಐಎಂಎ ಮನವಿ ಮಾಡಿದೆ.

See also  ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನೀಟ್‌ ವಿರುದ್ಧ ನಿರ್ಣಯ: ಎಚ್. ಡಿ. ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು