News Kannada
Friday, February 03 2023

ದೆಹಲಿ

ಇನ್ನುಮುಂದೆ ಹೆಲ್ಮೆಟ್ ಸಡಿಲವಾಗಿ ಧರಿಸಿದ್ದರೂ ದಂಡ

Photo Credit :

ಹೊಸದಿಲ್ಲಿ: ದ್ವಿಚಕ್ರ ಪ್ರಯಾಣಿಕರೇ ಗಮನಿಸಿ! ಬೈಕ್‌ ಅಥವಾ ಸ್ಕೂಟರ್‌ ಏರಿ ಸಾಗುವಾಗ ಹೆಲ್ಮೆಟ್‌ ಧರಿಸದಿದ್ದರೆ ಮಾತ್ರ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕುತ್ತಾರೆಂದು ಭಾವಿಸಿದ್ದರೆ ಅದು ತಪ್ಪು. ಹೆಲ್ಮೆಟ್‌ ಅನ್ನು ಸಡಿಲವಾಗಿ ಧರಿಸಿದ್ದರೂ ಅದಕ್ಕೆ ತತ್‌ಕ್ಷಣವೇ ಪಾವತಿಸಬೇಕಾದ 2 ಸಾವಿರ ರೂ.ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಹೆಲ್ಮೆಟ್‌ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಹಾಗಾಗಿ ಜನರು ಹೆಲ್ಮೆಟ್‌ ಧರಿಸುವುದನ್ನು ಕ‌ಡ್ಡಾಯಗೊಳಿಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

2 ಸಾವಿರ ರೂ.ದಂಡ ಹೇಗೆ?: ಹೆಲ್ಮೆಟ್‌ ಹಾಕಿದ್ದರೂ ಹೆಲ್ಮೆಟ್‌ನ ಬಕಲ್‌ ಹಾಕಿಕೊಳ್ಳದಿದ್ದರೆ 1 ಸಾವಿರ ರೂ. ತೆರಬೇಕಾಗುತ್ತದೆ. ಜತೆಗೆ ಧರಿಸಿರುವ ಹೆಲ್ಮೆಟ್‌ ಬಿಐಎಸ್‌ (ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಡ್‌) ಪ್ರಮಾಣೀಕೃತವಾಗಿರದಿದ್ದರೆ ಅದಕ್ಕೆ 1 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಹಾಗಾಗಿ ಒಟ್ಟಾರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ ಹೆಲ್ಮೆಟ್‌ ಸರಿಯಾಗಿ ಧರಿಸಿಯೂ ಸಿಗ್ನಲ್‌ ಜಂಪ್‌ ಮಾಡಿದರೆ ಅದಕ್ಕೆ 2 ಸಾವಿರ ರೂ. ದಂಡ ದಂಡ ಹಾಗೂ ಮೂರು ವರ್ಷಗಳವರೆಗೆ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕಿ ಕೊಳ್ಳುವ ಸಾಧ್ಯತೆಯಿದೆ.

See also  ಕೋವಿಡ್-19 3ನೇ ಅಲೆ ಅಕ್ಟೋಬರ್ ನಲ್ಲಿ ಉತ್ತುಂಗಕ್ಕೇರಲಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು