ನವದೆಹಲಿ: ದೆಹಲಿಯ ಲೋಧಿ ಕಾಲೋನಿಯಲ್ಲಿ ಆರು ವರ್ಷದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಕೊಂದಿದ್ದಾರೆ.
ಆರೋಪಿಗಳನ್ನು ವಿಜಯ್ ಮತ್ತು ಅಮರ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕರ ದೇವರ ಕನಸಿನಲ್ಲಿ ಮಗುವಿನ ಕತ್ತು ಸೀಳುವಂತೆ ಹೇಳಿದ್ದು, ಶನಿವಾರ ರಾತ್ರಿ ಈ ಕೃತ್ಯ ಎಸಗಿರುವುದಾಗಿ ಬಂಧಿತರು ಪೊಲೀಸರಿಗೆ ತಿಳಿಸಿದ್ದಾರೆ.
“ಮೃತನ ತಂದೆ ಸಿಆರ್‌ಪಿಎಫ್ ಹೆಡ್‌ಕ್ವಾರ್ಟರ್ಸ್ ಕಟ್ಟಡದ ಬಳಿಯ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯೂ ಅವನ ತಂದೆಯೊಂದಿಗೆ ಕೆಲಸ ಮಾಡುತ್ತಾನೆ. ಇಬ್ಬರಿಗೂ ಮೃತ ಅಥವಾ ಅವನ ಕುಟುಂಬದೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. ಅವರು ಮದ್ಯವ್ಯಸನಿಗಳಾಗಿದ್ದರು. ನಾವು ಅವರನ್ನು ಕೊಲೆಗಾಗಿ ಬಂಧಿಸಿದ್ದೇವೆ” ಪೊಲೀಸರು ಹೇಳಿದರು.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.