ನವದೆಹಲಿ: ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ನಿಷೇಧಿತ ವಸ್ತುವನ್ನು ಬಳಸಿದ್ದಕ್ಕಾಗಿ ಅಂತರರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಐಟಿಎ) 21 ತಿಂಗಳ ಕಾಲ ನಿಷೇಧ ಹೇರಿದೆ.
ಪರೀಕ್ಷಾ ವರದಿಯಲ್ಲಿ ದೀಪಾ ನಿಷೇಧಿತ ವಸ್ತುವಾದ ಹೈಜೆನಮೈನ್ ಸೇವಿಸಿರುವುದು ಬೆಳಕಿಗೆ ಬಂದಿದೆ.
ಶುಕ್ರವಾರ, ಐಟಿಎ ದೀಪಾ ಕರ್ಮಾಕರ್ ಅವರನ್ನು 21 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಖಚಿತಪಡಿಸಿದೆ. ಅವರ ಅಮಾನತು 10 ಜುಲೈ 2023 ರವರೆಗೆ ಜಾರಿಯಲ್ಲಿರುತ್ತದೆ.
ದೀಪಾ ಅವರ ಮಾದರಿಯನ್ನು 11 ಅಕ್ಟೋಬರ್ 2021 ರಂದು ಫೆಡರೇಶನ್ ಇಂಟರ್ನ್ಯಾಷನಲ್ ಡಿ ಜಿಮ್ನಾಸ್ಟಿಕ್ಸ್ (FIG) ಸ್ಪರ್ಧೆಯ ಹೊರಗಿನ ನಿಯಂತ್ರಣದ ಭಾಗವಾಗಿ ಸಂಗ್ರಹಿಸಿದೆ. ಇದನ್ನು ಪರೀಕ್ಷಿಸಿದಾಗ, ಇದು ಹೈಜೆನಮೈನ್ ಪಾಸಿಟಿವ್ ಎಂದು ಕಂಡುಬಂದಿದೆ. ಇದನ್ನು ವಿಶ್ವ ಉದ್ದೀಪನ ಮದ್ದು ತಡೆ ಏಜೆನ್ಸಿಯಿಂದ ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ.