ನವದೆಹಲಿ, ಫೆ 17: ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜೀರಿಯಾದ ಮಹಿಳೆಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು 18 ಕೋಟಿ ಮೌಲ್ಯದ 1.2 ಕೆಜಿ ಕೊಕೇನ್‌ನೊಂದಿಗೆ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆರೋಪಿ ನೈಜೀರಿಯನ್ ಮಹಿಳೆ ಅಡಿಸ್ ಅಬಾಬಾದಿಂದ ಬಂದಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅವಳನ್ನು ತಡೆಹಿಡಿಯಲಾಯಿತು.
ಮಹಿಳೆ ಎನ್ ಡಿಪಿಎಸ್ ಕಾಯ್ದೆಯ ಸೆಕ್ಷನ್ 8 ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಎನ್ ಡಿಪಿಎಸ್ ಕಾಯ್ದೆಯ ಸೆಕ್ಷನ್ 21, ಸೆಕ್ಷನ್ 23 ಮತ್ತು ಸೆಕ್ಷನ್ 29 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ. ಅದರಂತೆ ಆಕೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.