ನವದೆಹಲಿ: ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ದೆಹಲಿಯ ರಿಂಗ್ ರಸ್ತೆಯ ಐಪಿ ಮೆಟ್ರೋ ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಕೃಷ್ಣ ನಗರ ನಿವಾಸಿ ಪುನೀತ್ ಕೊಹ್ಲಿ (33) ಮತ್ತು ಹೌಜ್ ಸಾಯಿ ವಾಲಾ ನಿವಾಸಿ ಮೊಹಮ್ಮದ್ ಸುಹೇಲ್ (24) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶುಕ್ರವಾರ ಬೆಳಿಗ್ಗೆ, ಐಪಿ ಮೆಟ್ರೋ ನಿಲ್ದಾಣದ ಬಳಿಯ ರಿಂಗ್ ರಸ್ತೆಯಲ್ಲಿ ಎರಡು ವಾಹನಗಳ ಅಪಘಾತದ ಬಗ್ಗೆ ಐಪಿ ಎಸ್ಟೇಟ್ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿತು.
ಐಟಿಒದಿಂದ ಸರೈ ಕಾಲೆ ಖಾನ್ ಕಡೆಗೆ ಬರುತ್ತಿದ್ದ ಇಕೋ ಸ್ಪೋರ್ಟ್ ಕಾರು ಮತ್ತು ಸರಾಯ್ ಕಾಲೆ ಖಾನ್ ನಿಂದ ಐಟಿಒ ಕಡೆಗೆ ಬರುತ್ತಿದ್ದ ಹೋಂಡಾ ಸಿವಿಕ್ ಕಾರು ರಿಂಗ್ ರಸ್ತೆಯ ಐಪಿ ಮೆಟ್ರೋ ನಿಲ್ದಾಣದ ಬಳಿ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಇಕೋ ಸ್ಪೋರ್ಟ್ ಚಾಲಕ ಪುನೀತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಸುಹೇಲ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಹೋಂಡಾ ಸಿವಿಕ್ ಕಾರಿನಲ್ಲಿದ್ದ ಜುನೈದ್ (21) ಮತ್ತು ರಿಹಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಎಲ್ಎನ್ಜೆಪಿ ಆಸ್ಪತ್ರೆಗೆ ಸಾಗಿಸಲಾಗಿದೆ.