ನವದೆಹಲಿ: ದಕ್ಷಿಣ ದೆಹಲಿ ಜಿಲ್ಲೆಯಲ್ಲಿ 16 ಜೂಜುಕೋರರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಅವರಿಂದ 63,000 ರೂ.ಗಿಂತ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ದಕ್ಷಿಣಪುರಿಯಲ್ಲಿ ವ್ಯಕ್ತಿಯೊಬ್ಬರು ಜೂಜಾಟವನ್ನು ಆಯೋಜಿಸುತ್ತಿದ್ದಾರೆ ಎಂದು ದಕ್ಷಿಣ ಜಿಲ್ಲಾ ಪೊಲೀಸರ ಮಾದಕವಸ್ತು ದಳದ ತಂಡಕ್ಕೆ ಮಾಹಿತಿ ಸಿಕ್ಕಿತ್ತು.
“ಗುರುವಾರ 16 ಜನರು ಜೂಜಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಲಾಯಿತು. ತಪಾಸಣೆ ನಡೆಸಿದಾಗ ಕ್ಯಾಲ್ಕುಲೇಟರ್ಗಳು, ಕಾರ್ಬನ್ ಪೇಪರ್ಗಳು, ಪೆನ್ನುಗಳು, ಚೀಟಿಗಳನ್ನು ಹೊಂದಿರುವ ಸ್ಕೇಲ್ ಪೇಪರ್ ಚಾರ್ಟ್, ಚಿತ್ರಗಳನ್ನು ಹೊಂದಿರುವ ಫ್ಲೆಕ್ಸ್ ಚಾರ್ಟ್, ಲಿಖಿತ ಚೀಟಿ, ಕಾಗದಗಳು ಮತ್ತು 63,410 ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಚಂದನ್ ಚೌಧರಿ ತಿಳಿಸಿದ್ದಾರೆ.
“ದೆಹಲಿ ಸಾರ್ವಜನಿಕ ಜೂಜಾಟ ಕಾಯ್ದೆಯ ಸಂಬಂಧಿತ ವಿಭಾಗದ ಅಡಿಯಲ್ಲಿ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ” ಎಂದು ಡಿಸಿಪಿ ಹೇಳಿದರು.