ದೆಹಲಿ: ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರ ದೇಶದಾದ್ಯಂತ ಉತ್ಸಾಹಿ ಯುವ ಬರಹಗಾರರನ್ನು ಆಯ್ಕೆ ಮಾಡಿದ್ದು ಕೊಡಗು ಜಿಲ್ಲೆಯ ಕಾಕೋಟು ಪರಂಬುವಿನ ಮೇವಡ ಅಯ್ಯಣ್ಣ ಹಾಗೂ ಚೇಂದಂಡ(ಹೊಸೂರು) ಮೀನಾಕ್ಷಿ ದಂಪತಿಯ ಪುತ್ರಿ ಯುವ ಬರಹಗಾರ್ತಿ ಆಲಿಯಾ ಚೋಂದಮ್ಮ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ದೇಶದಾದ್ಯಂತ ಒಟ್ಟು 75 ಯುವ ಬರಹಗಾರರನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು ಕರ್ನಾಟಕದಿಂದ ಆಯ್ಕೆಗೊಂಡ ಮೂವರಲ್ಲಿ ಕೊಡಗಿನ ಆಲಿಯಾ ಚೋಂದಮ್ಮ ಇಡೀ ದೇಶದಲ್ಲೇ ಅತೀ ಕಿರಿಯ ವಯಸ್ಸಿನ(16 ವರ್ಷ) ಬರಹಗಾರ್ತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಆಲಿಯಾ ಚೋಂದಮ್ಮ ಗೋಣಿಕೊಪ್ಪಲಿನ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಪೂರೈಸಿ ಪ್ರಸ್ತುತ ಬೆಂಗಳೂರಿನ ಬೆಥನಿಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.
ದೆಹಲಿಯಲ್ಲಿ ನಡೆಯುತ್ತಿರುವ 9 ದಿನಗಳ ವರ್ಲ್ಡ್ ಬುಕ್ ಫೇರ್ ನಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಆಲಿಯಾ ಚೋಂದಮ್ಮ ಬರೆದಿರುವ “ದಿ ಲಾಸ್ಟ್ ಹೀರೋಸ್ ಆಫ್ ಕೊಡಗು” ಪುಸ್ತಕ ಬಿಡುಗಡೆಗೊಂಡಿದೆ.