ನವದೆಹಲಿ: ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಬಾಲ್ಯದಲ್ಲಿ ತನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಎಂದು ಶನಿವಾರ ಹೇಳಿದ್ದಾರೆ.
“ನಾನು ಬಾಲ್ಯದಲ್ಲಿ ನನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ. ನನ್ನ ತಂದೆ ನನ್ನನ್ನು ಥಳಿಸುತ್ತಿದ್ದರು, ಆದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾಸಿಗೆಯ ಕೆಳಗೆ ಅಡಗಿಕೊಳ್ಳುತ್ತಿದ್ದೆ, ನನ್ನ ತಂದೆ ನನ್ನ ಕೂದಲನ್ನು ಹಿಡಿದು ಗೋಡೆಗೆ ನನ್ನ ತಲೆಯನ್ನು ಹೊಡೆಯುತ್ತಿದ್ದರು ಎಂದು ದೆಹಲಿ ಡಿಸಿಡಬ್ಲ್ಯು ವಾರ್ಷಿಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದರು.
“ಹಾಸಿಗೆಯ ಕೆಳಗೆ ಅಡಗಿರುವಾಗ, ಮಹಿಳೆಯರು ಮತ್ತು ಮಕ್ಕಳನ್ನು ನಿಂದಿಸುವ ಇಂತಹ ಪುರುಷರಿಗೆ ನಾನು ಹೇಗೆ ಪಾಠ ಕಲಿಸಬೇಕು. ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆಯಲು ನಾನು ಹೇಗೆ ಸಹಾಯ ಮಾಡಬಹುದು ಎಂದು ನಾನು ಯೋಚಿಸುತ್ತಿದ್ದೆ” ಎಂದು ಮಲಿವಾಲ್ ಹೇಳಿದರು.
ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕೆನಡಾದ ಹಂಗಾಮಿ ಹೈ ಕಮಿಷನರ್ ಅಮಂಡಾ ಸ್ಟ್ರೋಹಾನ್ ಅವರು ಭಾಗವಹಿಸಿದ್ದರು .