ನವದೆಹಲಿ: ವಿಸ್ತಾರಾ ವಿಮಾನದಲ್ಲಿ ಕುಡುಕರ ಗುಂಪೊಂದು ಮಹಿಳೆಯರು ಸೇರಿದಂತೆ ಕೆಲವರಿಗೆ ಕಿರುಕುಳ ನೀಡಿದ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.
“ಇಂದು ವಿಸ್ತಾರಾ ಯುಕೆ 256ನಲ್ಲಿ ಪ್ರಯಾಣಿಸಿದೆ ಮತ್ತು ಕೆಟ್ಟ ಅನುಭವಗಳಲ್ಲಿ ಎದುರಿಸಿದೆ. ಕೆಲವು ಪ್ರಯಾಣಿಕರು ಸಂಪೂರ್ಣವಾಗಿ ಕುಡಿದು ಮಹಿಳೆಯರು ಮತ್ತು ಇತರರಿಗೆ ಕಿರುಕುಳ ನೀಡುತ್ತಿದ್ದರು. ಆದರೆ ಸಿಬ್ಬಂದಿಗಳಾದ ಶ್ರೇಯಾ, ಚೈತಾಲಿ, ಚಾರ್ಲ್ಸ್ ಪ್ರಯಾಣಿಕರ ದುಂಡಾವರ್ತನೆ ತಡೆಯಲಿಲ್ಲ. ಬದಲಿಗೆ ಘಟನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂದು ಟ್ವಿಟರ್‌ನಲ್ಲಿ ದೂರಿದ್ದಾರೆ.
ಮುಂದುವರಿದು ವಿಸ್ತಾರಾ ಪ್ರೀಮಿಯಂ ಸೇವೆಗೆ ಹೆಸರುವಾಸಿಯಾಗಿದೆ. ಆದರೆ ಇಂದು ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸದೇ ನಗುತ್ತಾ ನಿಂತಿದ್ದರು ಎಂದು ಮಾ.12ರಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ಏರ್‌ಲೈನ್, “ನಮ್ಮ ಸಿಬ್ಬಂದಿ ವಿಮಾನದಲ್ಲಿರುವ ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ತರಬೇತಿ ಪಡೆದಿದ್ದಾರೆ. ಇದು ಅನಿರೀಕ್ಷಿತ ಘಟನೆಯಂತೆ ತೋರುತ್ತದೆ. ನಾವು ಅಂತಹ ನಡವಳಿಕೆಯನ್ನು ಕ್ಷಮಿಸುವುದಿಲ್ಲ ಎಂದು ತಿಳಿಸಿದೆ. 2021 ರಿಂದ ವಿವಿಧ ವಿಮಾನಯಾನ ಸಂಸ್ಥೆಗಳಿಂದ ಡಿಜಿಸಿಎಗೆ ಒಟ್ಟು 139 ಅಶಿಸ್ತಿನ ಘಟನೆಗಳು ವರದಿಯಾಗಿವೆ.