News Kannada
Friday, February 23 2024
ದೆಹಲಿ

ಪಾಕ್‌ ಗೆ ತೆರಳಿದ್ದ ಅಂಜು ಮತ್ತೆ ಭಾರತಕ್ಕೆ ವಾಪಸ್‌

Anju, who had gone to Pakistan, returned to India
Photo Credit : News Kannada

ನವದೆಹಲಿ: ಅಂಜು ಈ ಹೆಸರು ಕಳೆದ ಕೆಲ ತಿಂಗಳ ಹಿಂದೆ ಜಗತ್ತಿನಾದ್ಯಂತ ಚರ್ಚೆಯಲ್ಲಿತ್ತು. ಪಾಕ್‌ ನಲ್ಲಿದ್ದ ತನ್ನ ಪ್ರಿಯತಮ ನಸ್ರುಲ್ಲಾನನ್ನು ಅರಸಿಕೊಂಡು ಹೋಗಿ ಆತನನ್ನು ಎರಡನೇ ವಿವಾಹವಾಗಿದ್ದ ಅಂಜು ಇದೀಗ ಭಾರತಕ್ಕೆ ಮರಳಿದ್ದಾರೆ.

ರಾಜಸ್ಥಾನದ ಅಲ್ವಾರ್ ನಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನಸ್ರುಲ್ಲಾನನ್ನುಅಂಜು ವಿವಾಹವಾಗಿದ್ದಳು. ಆರು ತಿಂಗಳ ಬಳಿಕ ವಾಘಾ ಗಡಿ ಮೂಲಕ ತವರಿಗೆ ಮರಳಿದ್ದಾರೆ. ಪಾಕಿಸ್ತಾನದಲ್ಲಿ ನಸ್ರುಲ್ಲಾನನ್ನು ಮದುವೆಯಾಗಿ ಫಾತಿಮಾ ಆಗಿದ್ದ ಅಂಜು ತನ್ನ ಮಕ್ಕಳನ್ನು ಭೇಟಿಯಾಗಲು ಹಂಬಲಿಸುತ್ತಿದ್ದಳು.

ಇದೀಗ ಭಾರತಕ್ಕೆ ಆಗಮಿಸಿದ್ದು ತನ್ನ ಎರಡೂ ಮಕ್ಕಳೊಂದಿಗೆ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುತ್ತಾಳೆ ಎಂದು ಆಕೆಯ ಎರಡನೇ ಪತಿ ನಸ್ರುಲ್ಲಾ ಹೇಳಿದ್ದಾನೆ. ಅಂಜುಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಅಂಜು ಅವರ ಪತಿ ಅರವಿಂದ್ ಈಗ ಮಕ್ಕಳೊಂದಿಗೆ ಭಿವಾಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು