News Kannada
Monday, December 11 2023
ದೆಹಲಿ

ಅಯೋಧ್ಯೆ ರಾಮ ಮೂರ್ತಿ ಪ್ರತಿಷ್ಠಾಪನೆ ದಿನಾಂಕ ಘೋಷಣೆ

Ayodhya Ram statue installation date announced
Photo Credit : News Kannada

ನವದೆಹಲಿ: ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕೆಲವೊಂದು ಕೆಲಸಗಳು ಪೂರ್ಣಗೊಂಡಿದೆ. ಜನವರಿಯಲ್ಲಿ ಇದರ ಉದ್ಟಾಟನೆ ನಡೆಯಲಿದೆ ಎಂದು ರಾಮ ಜನ್ಮಭೂಮಿ ಸಮಿತಿ ಹೇಳಿದೆ.

ದೇವಾಲಯ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದು, ನೆಲ ಮಹಡಿಯ ನಿರ್ಮಾಣ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಲಿದ್ದು 2024ರ ಜನವರಿ ತಿಂಗಳ ನಾಲ್ಕನೇ ವಾರದಲ್ಲಿ ಅಂದರೆ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. 4 ಜನವರಿ 20ರಿಂದ 24ರ ನಡುವೆ ನಡೆಯುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಪ್ರತಿಷ್ಠಾಪನೆಯ ಅಂತಿಮ ದಿನಾಂಕವನ್ನು ಮೋದಿ ಅವರಿಗೆ ಇನ್ನೂ ತಿಳಿಸಬೇಕಿದೆ ಎಂದು ತಿಳಿಸಿದ್ದಾರೆ.

ದೇಗುಲದ ಗೋಪುರದಲ್ಲಿ ಅಳವಡಿಸಬೇಕಿರುವ ವಿಶಿಷ್ಟ ಉಪಕರಣದ ವಿನ್ಯಾಸ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ರಾಮನವಮಿಯ ದಿನದಂದು ಶ್ರೀರಾಮನ ಹಣೆಗೆ ಸೂರ್ಯನ ಕಿರಣಗಳು ನೇರವಾಗಿ ಬೀಳುವಂತೆ ಮಾಡಲು ಈ ಉಪಕರಣ ಸಹಕಾರಿಯಾಗಿದೆ. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್‌ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಪುಣೆಯ ಒಂದು ಸಂಸ್ಥೆ ಜಂಟಿಯಾಗಿ ಇದಕ್ಕಾಗಿ ಗಣಕೀಕೃತ ಕಾರ್ಯಕ್ರಮವನ್ನು ರಚಿಸಿದೆ’ ಎಂದು ವಿವರಿಸಿದ್ದಾರೆ.

See also  ಮಕ್ಕಳಲ್ಲಿ ಸಕಾರಾತ್ಮಕ ಚಿತ್ರಣವನ್ನು ಬೆಳೆಸುವುದು ಹೇಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು