ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಮೊದಲ ಲಘು ಯುದ್ಧ ವಿಮಾನ ತೇಜಸ್ ಅವಳಿ ಆಸನಗಳ ತರಬೇತಿ ಆವೃತ್ತಿಯ ವಿಮಾನವನ್ನು ಭಾರತೀಯ ವಾಯುಪಡೆಗೆ ಬುಧವಾರ ಹಸ್ತಾಂತರಿಸಿದೆ. LCA ತೇಜಸ್ ಅವಳಿ ಆಸನವು ಹಗುರವಾದ, ಎಲ್ಲಾ ಹವಾಮಾನದ ಹೊಂದಿಕೊಳ್ಳುವ ಮಲ್ಟಿಪಲ್ ರೋಲ್‌ನ 4.5 ಪೀಳಿಗೆಯ ವಿಮಾನವಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮುಖ್ಯಸ್ಥರು ಎಲ್ ಸಿಎ ಮಾದರಿ ವಿಮಾನವನ್ನು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯಸಚಿವ ಅಜಯ್ ಭಟ್ ಅವರಿಗೆ ಹಸ್ತಾಂತರಿಸುವ ಮೂಲಕ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ದಿನವನ್ನ ಐತಿಹಾಸಿಕ ಎಂದು ಕರೆದ HAL, ಇದು ಅಂತಹ ಸಾಮರ್ಥ್ಯಗಳನ್ನ ರಚಿಸಿದ ಮತ್ತು ಅವುಗಳನ್ನ ತಮ್ಮ ರಕ್ಷಣಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ́ಕೆಲವೇ-ಕೆಲವೇ ಗಣ್ಯ ದೇಶಗಳ ಪಟ್ಟಿಗೆ ಭಾರತವನ್ನು ಸೇರಿದೆ ಎಂದು ಹೇಳಿದೆ.