ನವದೆಹಲಿ: ಸ್ವದೇಶಿ ಎಲೆಕ್ಟ್ರಿಕ್ ವಾಹನ ಕಂಪನಿ ಅಥೆರ್ ಎನರ್ಜಿ ಹೊಸ ಇ-ಸ್ಕೂಟರ್ ‘450S ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇದು 3 kWh ಬ್ಯಾಟರಿ ಪ್ಯಾಕ್ನಿಂದ ಚಾಲಿತವಾಗಿದ್ದು, ಸವಾರರಿಗೆ ಉತ್ತಮ , ಆರಾಮದಾಯಕ ಅನುಕೂಲಗಳನ್ನು ಒದಗಿಸಲಿದೆ ಎಂದು ಕಂಪನಿ ಹೇಳಿದೆ. ಸ್ಕೂಟರ್ ಆರಂಭಿಕ ಬೆಲೆ 1,29,999 ರೂ.ನಿಂದ ಆರಂಭವಾಗಲಿದ್ದು. ಜುಲೈನಿಂದ ಹೊಸ ಬುಕಿಂಗ್ ಅನ್ನು ಸ್ವೀಕರಿಸಲಾಗುತ್ತದೆ.
ಸ್ಕೂಟರ್ ಸುರಕ್ಷೆ ವಿಷಯ, ಸವಾರಿಯಲ್ಲಿ ನಿಜವಾದ ಆನಂದ ನೀಡುತ್ತದೆ ಎಂದು ಕಂಪನಿ ಸಹ ಸಂಸ್ಥಾಪಕ ತರುಣ್ ಮೆಹ್ತಾ ತಿಳಿಸಿದ್ದಾರೆ. ಕಂಪನಿ ಮಾಹಿತಿ ಪ್ರಕಾರ 450S ಸ್ಕೂಟರ್ ಭಾರತೀಯ ರಸ್ತೆ ಸ್ಥಿತಿಗತಿ ಅನುಸರಿಸಿ ಒಂದು ಚಾರ್ಜ್ಗೆ 115 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಹೇಳಿದೆ.