ನವದೆಹಲಿ: ಕರ್ನಾಟಕದಲ್ಲಿ ತೀವ್ರ ಬರಗಾಲದ ಛಾಯೆಯಿದೆ. ಮುಂಗಾರು ಅವಧಿಯಲ್ಲಿಯೇ ಜಲಾಶಯಗಳು ನೀರಿಲ್ಲದೆ ಭಣಗುಡುತ್ತಿವೆ. ಈ ಮಧ್ಯೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ.
ಭಾರತೀಯ ಹವಾಮಾನ ಇಲಾಖೆ ದೇಶದ 718 ಜಿಲ್ಲೆಗಳ ಪೈಕಿ 500ಕ್ಕೂ ಹೆಚ್ಚು ಜಿಲ್ಲೆಗಳು ಪ್ರಸ್ತುತ ಬರಗಾಲದಂತಹ ಪರಿಸ್ಥಿತಿ ಎದುರಿಸುತ್ತಿವೆ ಎಂದು ಹೇಳಿದೆ. ಇದರಿಂದ ಆಹಾರ ದಾಸ್ತಾನಿಗೆ ತೊಂದರೆ ಉಂಟಾಗಬಹುದು ಎಂದು ಹೇಳಿದೆ.
ದೇಶದ 53 ಪ್ರತಿಶತ ಜಿಲ್ಲೆಗಳು ಮಧ್ಯಮ ಬರ ವರ್ಗದಲ್ಲಿವೆ. ಇಡೀ ಈಶಾನ್ಯ ಭಾರತ, ಪೂರ್ವ ಭಾರತದ ಕೆಲವು ಭಾಗಗಳು, ಜಮ್ಮು ಮತ್ತು ಕಾಶ್ಮೀರ, ದಕ್ಷಿಣ ಪರ್ಯಾಯ ದ್ವೀಪದ ಬಹುತೇಕ ಭಾಗಗಳು ಅಂದರೆ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳು ಮಧ್ಯಮ ಶುಷ್ಕ ಅಥವಾ ಅತ್ಯಂತ ಒಣ ಬರ ವರ್ಗದಲ್ಲಿವೆ.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಅಲ್ಲಲ್ಲಿ ಅಲ್ಲಲ್ಲಿ ಮಳೆಯಾಗಿದೆ.
ಅಲ್ಲದೆ, ಮುಂಗಾರು ದೀರ್ಘ ವಿರಾಮ ತೆಗೆದುಕೊಂಡಿದೆ. ದೀರ್ಘಾವಧಿಯ ವಿರಾಮವು ಆಗಸ್ಟ್ ತಿಂಗಳಿನಲ್ಲಿತ್ತು. ಇದರಿಂದಾಗಿ ಭಾರತದ ಶೇಕಡ 70ರಷ್ಟು ಪ್ರದೇಶಗಳಲ್ಲಿ ಬರಗಾಲದಂತಹ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿವೆ.