News Kannada
Wednesday, February 28 2024
ದೆಹಲಿ

ನವದೆಹಲಿ: 300 ಗ್ರಾಂ ಹೆರಾಯಿನ್ ನೊಂದಿಗೆ ಆಫ್ರಿಕನ್ ಪ್ರಜೆಯ ಬಂಧನ

Attempt to sell ganja near Guruvayanakere school: Two arrested
Photo Credit : Pixabay

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 303 ಗ್ರಾಂ ಹೆರಾಯಿನ್ ನೊಂದಿಗೆ 36 ವರ್ಷದ ಆಫ್ರಿಕನ್  ಡ್ರಗ್ ಪೆಡ್ಲರ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಆರೋಪಿಯನ್ನು ಘಾನಾ ನಿವಾಸಿ ಜೋಸೆಫ್ ಬೊವಾಕೆ ಎಂದು ಗುರುತಿಸಲಾಗಿದೆ.

ಆಗಸ್ಟ್ 6 ರಂದು ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ತೊಡಗಿದ್ದ ಆಫ್ರಿಕನ್ ಪ್ರಜೆಯ ಚಲನವಲನದ ಬಗ್ಗೆ ರಹಸ್ಯ ಮಾಹಿತಿಯನ್ನು ಪಡೆಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಎಂ. ಹರ್ಷವರ್ಧನ್ ಹೇಳಿದರು, ನಂತರ ಪೊಲೀಸ್ ತಂಡವು ದೆಹಲಿಯ ಮೋಹನ್ ಗಾರ್ಡನ್ ವಿಪಿನ್ ಗಾರ್ಡನ್ ಎಕ್ಸ್ಟ್ ಗೆ ತಲುಪಿ ಅಲ್ಲಿ ಬಂಧಿಸಿದ್ದಾರೆ.

ಭಗವತಿ ಗಾರ್ಡನ್ ನಿಂದ ಆಫ್ರಿಕನ್ ಪ್ರಜೆಯೊಬ್ಬರು ಸ್ಕೂಟಿಯಲ್ಲಿ ಬರುತ್ತಿರುವುದು ಕಂಡುಬಂದಿದೆ. ಪೊಲೀಸ್ ರನ್ನು ನೋಡಿದ ನಂತರ ಆರೋಪಿ ಪಲಾಯನ ಮಾಡಲು ಪ್ರಯತ್ನಿಸಿದ್ದಾನೆ ಆದರೆ ಪೊಲೀಸ್ ತಂಡವು  ಸ್ಕೂಟಿಯೊಂದಿಗೆ ಆರೋಪಿಯನ್ನು ಬಂಧಿಸಿದೆ ಎಂದು ಡಿಸಿಪಿ ಹೇಳಿದರು.

ಶೋಧದ ಸಮಯದಲ್ಲಿ, ಬಿಳಿ ವಸ್ತುವನ್ನು ಹೊಂದಿರುವ ಪಾಲಿಥಿನ್ ಅನ್ನು ಅವನ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ, ಇದನ್ನು  ಪರಿಶೀಲಿಸಿದಾಗ 303 ಗ್ರಾಂ ತೂಕದ ಹೆರಾಯಿನ್ ಎಂದು ಕಂಡುಬಂದಿದೆ.

ಅದರಂತೆ, ಪೊಲೀಸರು ಎನ್ ಡಿ ಪಿ ಎಸ್ ಕಾಯ್ದೆಯ ಸೆಕ್ಷನ್ 8, 21 ಮತ್ತು 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು