News Karnataka Kannada
Tuesday, April 23 2024
Cricket
ದೆಹಲಿ

ಹೊಸದಿಲ್ಲಿ: ಪ್ರಧಾನಿ ಮೋದಿ ಕಾಲಿಗೆರಗಿ ನಮಸ್ಕರಿಸಿದ ನ್ಯೂಗಿನಿಯಾ ಪ್ರಧಾನಿ

New Guinea's Prime Minister bows at the feet of Prime Minister Narendra Modi
Photo Credit : IANS

ಹೊಸದಿಲ್ಲಿ: ಪಪುವಾ ನ್ಯೂಗಿನಿಯಾಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿ ಪಪುವಾ ನ್ಯೂಗಿನಿಯಾ ಪ್ರಧಾನಿ ಸ್ವಾಗತಿಸಿದರು.

ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿಯವರು ತಮ್ಮ ಎರಡನೇ ಹಂತದ ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಪಪುವಾ ನ್ಯೂಗಿನಿಯಾಗೆ ಆಗಮಿಸಿದರು. ಈ ಬಗ್ಗೆ ಟ್ವೀಟ್‌ನಲ್ಲಿ ಮೋದಿ ಬರೆದುಕೊಂಡಿದ್ದು, “ಪಾಪುವಾ ನ್ಯೂಗಿನಿಯಾವನ್ನು ತಲುಪಿದ್ದೇನೆ. ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದಕ್ಕಾಗಿ ನಾನು ಪ್ರಧಾನಿ ಜೇಮ್ಸ್ ಮರಾಪೆ ಅವರಿಗೆ ಧನ್ಯವಾದ ಹೇಳುತ್ತೇನೆ. ಪಪುವಾ ನ್ಯೂಗಿನಿಯಾದೊಂದಿಗೆ ಭಾರತ ಬಾಂಧವ್ಯವನ್ನು ಹೆಚ್ಚಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮರಾಪೆ ಅವರು ಮೋದಿ ಅವರ ಪಾದಗಳನ್ನು ಸ್ಪರ್ಶಿಸುವ ವೀಡಿಯೊವನ್ನು ಬಿಜೆಪಿ ಹಂಚಿಕೊಂಡಿದೆ: “ಗೌರವದ ಸಂಕೇತವಾಗಿ, ಪಪುವಾ ನ್ಯೂಗಿನಿಯಾದ ಪ್ರಧಾನಿ ಪ್ರಧಾನಿ ಮೋದಿಯವರ ಪಾದಗಳನ್ನು ಮುಟಿದ್ದಾರೆ ಎಂದು ಹೇಳಿದೆ. ಭಾರತೀಯ ಸಮುದಾಯವೂ ಪ್ರಧಾನಿ ಅವರನ್ನು ಸ್ವಾಗತಿಸಿತು.

ಟ್ವೀಟ್‌ನಲ್ಲಿ ಮೋದಿ, “ಪಪುವಾ ನ್ಯೂಗಿನಿಯಾದಲ್ಲಿ ಭಾರತೀಯ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಮನಾರ್ಹವಾದ ಪ್ರೀತಿಯನ್ನು ತೋರಿಸಿದೆ. ಸ್ಮರಣೀಯ ಸ್ವಾಗತಕ್ಕಾಗಿ ಅವರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು