ದೆಹಲಿ: ಹಸಿರು ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಆದೇಶಕ್ಕೆ ಬೆಂಬಲ ನೀಡಿರುವ ಸುಪ್ರೀಂಕೋರ್ಟ್ “ಬೇರಿಯಂ” ಪಟಾಕಿ ಉತ್ಪಾದನೆ, ಮಾರಾಟಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಬೇರಿಯಂ ಬಳಸಿ ಪಟಾಕಿಗಳ ತಯಾರಿಕೆ ಮತ್ತು ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ತಿರಸ್ಕರಿಸಿತು.
ದೀಪಾವಳಿ ಹಾಗೂ ಇತರೆ ಹಬ್ಬಗಳಲ್ಲಿ ಪಟಾಕಿ ಹಚ್ಚಲು ಅವಕಾಶ ನೀಡಬೇಕೆ ಎಂಬುದರ ಕುರಿತು ಇಂದು ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದೆ. ಕಳೆದ ವಾರ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದ್ದು, ದೆಹಲಿಯಂತಹ ರಾಜ್ಯಗಳಲ್ಲಿ ಪಟಾಕಿ ಸಂಪೂರ್ಣ ನಿಷೇಧವಿರುವ ರಾಜ್ಯಗಳಲ್ಲಿ ಹಸಿರು ಪಟಾಕಿ ಸುಡುವುದಕ್ಕೂ ಅವಕಾಶವಿಲ್ಲ, ನ್ಯಾಯಾಲಯ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದಿತ್ತು.
ಇದಕ್ಕೂ ಮುನ್ನ ದೆಹಲಿಯಲ್ಲಿ ಪಟಾಕಿ ತಯಾರಿಕೆ, ಸಂಗ್ರಹ, ಮಾರಾಟ ಹಾಗೂ ಸಿಡಿಸುವಿಕೆಯ ಮೇಲೆ ಸಮಗ್ರ ನಿಷೇಧ ಹೇರಿರುವ ದೆಹಲಿ ಸರ್ಕಾರದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.
ಪಟಾಕಿ ಸಿಡಿಸುವವರನ್ನು ಶಿಕ್ಷಿಸಿದರೆ ಸಾಲದು ಮತ್ತು ಅಧಿಕಾರಿಗಳು ಈ ಪಟಾಕಿಗಳ ಮೂಲಕ್ಕೆ ಹೋಗಬೇಕು ಎಂದು ನ್ಯಾಯಾಲಯ ಸೂಚನೆ ಕೊಟ್ಟಿದೆ. 2021ರಲ್ಲಿ ಪಟಾಕಿಗಳ ಬಳಕೆಗೆ ಯಾವುದೇ ನಿಷೇಧವಿಲ್ಲ ಮತ್ತು ಬೇರಿಯಂ ಲವಣಗಳನ್ನು ಹೊಂದಿರುವ ಪಟಾಕಿಗಳನ್ನು ಮಾತ್ರ ನಿಷೇಸಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು.