ನವದೆಹಲಿ: ವಿಮಾನ ಪೈಲಟ್‌ಗಳು ಸಿಬ್ಬಂದಿ ಕುಡಿದು ಕೆಲಸ ಮಾಡುವುದು ನಿಷಿದ್ಧ ಇದ್ದೇ ಇದೆ. ಆದರೆ, ಸುಗಂಧ ದ್ರವ್ಯ ಕೂಡ ಬಳಸಬಾರದು ಎಂಬ ನಿಯಮ ಮಾಡಲಾಗುತ್ತಿದೆ ಎಂಬುದು ಕೊಂಚ ವಿಲಕ್ಷಣ ಎನಿಸಬಹುದು. ಆದರೆ, ಇದು ನಿಜ. ಭಾರತವು ಇಂಥದೊಂದು ರೂಲ್ಸ್ ಮಾಡಲು ಹೊರಟಿದೆ. ಸುಗಂಧ ದ್ರವ್ಯ ಬಳಸುವ ಪೈಲಟ್ ಮತ್ತು ವಿಮಾನ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವ ನಿಯಮಗಳನ್ನು ಜಾರಿಗೆ ತರಲು ಹೊರಟಿದೆ.
ದೇಶದ ವಾಯುಯಾನ ಉದ್ಯಮವನ್ನು ಮೇಲ್ವಿಚಾರಣೆ ಹೊಣೆ ಹೊತ್ತಿರುವ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶಕರ ಕಚೇರಿ (DGCA), ಇತ್ತೀಚೆಗೆ ಮದ್ಯ ಸೇವನೆಗೆ ಸಂಬಂಧಿಸಿದಂತೆ ಅದರ ಬೈಲಾಗಳಿಗೆ ಕೆಲವು ಅಪ್‌ಡೇಟ್ಸ್ ಮಾಡಲು ಸೂಚಿಸಿದೆ. ಅಲ್ಕೋಹಾಲಿಕ್ ಪಾನೀಯಗಳು ಮಾತ್ರವಲ್ಲದೇ ಪಾಸಿಟಿವ್ ಬ್ರೆತ್ ಟೆಸ್ಟ್‌ಗೆ ಕಾರಣವಾಗುವ ಮೌತ್ ವಾಶ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನಿಷೇಧಿಸಿದ ಪ್ರಸ್ತಾಪ ಗೈಡ್‌ಲೈನ್ಸ್‌ನಲ್ಲಿದೆ. ಈ ಕೆಟಗರಿಗೆ ಹೊಸ ವಸ್ತುವನ್ನು ಸೇರಿಸಲಾಗುತ್ತಿದೆ. ಅದುವೇ- ಸುಗಂಧ ದ್ರವ್ಯ. ಪೈಲಟ್‌ಗಳು ಮತ್ತು ವಿಮಾನ ಸಿಬ್ಬಂದಿ ಪೈಲಟ್‌ಗಳು ಸುಗಂಧ ದ್ರವ್ಯವನ್ನು ಬಳಸುವಂತಿಲ್ಲ ಎನ್ನಲಾಗುತ್ತಿದೆ.
ವಿಮಾನ ಸಿಬ್ಬಂದಿ ಸದಸ್ಯರು ಯಾವುದೇ ಔಷಧವನ್ನು ಸೇವಿಸಬಾರದು ಅಥವಾ ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲುಯುಕ್ತ ಅಂಶವನ್ನು ಹೊಂದಿರುವ ಯಾವುದೇ ಉತ್ಪನ್ನವನ್ನು ಬಳಸಬಾರದು. ಈ ಸೇವನೆಗಳು ಪಾಸಿಟಿವ್ ಬ್ರೆಥ್ ಟೆಸ್ಟ್‌ಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.ಇನ್ನು ಈ ನಿಯಮ ಯಾವಾಗ ಜಾರಿಗೆ ಬರುತ್ತೊ ಕಾದು ನೋಡಬೇಕಿದೆ