News Kannada
Saturday, March 02 2024
ದೆಹಲಿ

ಕಿಸಾನ್ ಸಮ್ಮಾನ್ ನಿಧಿಯ 15ನೇ ಕಂತನ್ನು ಬಿಡುಗಡೆ ಮಾಡಿದ ಮೋದಿ

Who wants Congress' 'money heist' fairy tale: PM Modi
Photo Credit : News Kannada

ದೆಹಲಿ:  ದೀಪಾವಳಿ ಹಬ್ಬದಂದೇ ಪ್ರಧಾನಿ ಮೋದಿ ದೇಶದ ರೈತರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ದೇಶದ 8 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.

ಜಾರ್ಖಂಡ್‌ನ ಖುಂಟಿಯಲ್ಲಿ ಬಿರ್ಸಾ ಮುಂಡಾ ಜಯಂತಿಯಂದು ‘ಬುಡಕಟ್ಟು ಹೆಮ್ಮೆಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಬಟನ್ ಒತ್ತುವ ಮೂಲಕ ಅವರು ಯೋಜನೆಯ ಹಣವನ್ನು ರೈತರ ಖಾತೆಗಳಿಗೆ ಹಸ್ತಾಂತರಿಸಿ, ನೇರ ನಗದು ವರ್ಗಾವಣೆ ಮೂಲಕ ಕೋಟ್ಯಂತರ ರೈತರ ಖಾತೆಗಳಿಗೆ 2000 ರೂ. ತಲುಪಿಸಿದ್ದಾರೆ .

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾದಾಗಿನಿಂದ (2019ರ ಫೆಬ್ರವರಿ 24ರಂದು) ರೈತರ ಖಾತೆಗಳಿಗೆ ಒಟ್ಟು ಮೊತ್ತವು 2.80 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ಪ್ರತಿ ವರ್ಷ 6,000 ರೂ.ಗಳನ್ನು ದೇಶದ ರೈತ ಖಾತೆಗಳಿಗೆ ಜಮೆ ಮಾಡಿದ್ದಾರೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ, ವರ್ಷದಲ್ಲಿ 3 ಕಂತುಗಳಲ್ಲಿ ಈ ಹಣವನ್ನು ಖಾತೆಗಳಿಗೆ ಠೇವಣಿ ಮಾಡಲಾಗುತ್ತದೆ.

ಇದುವರೆಗೆ ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತರಿಗೆ 2.61 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತವನ್ನು ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು