News Kannada
Tuesday, June 06 2023
ದೆಹಲಿ

ನೋಟುಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆ: ಜನರಿಗೆ ಆರ್‌ಬಿಐ ಗವರ್ನರ್‌ ಹೇಳಿದ್ದೇನು ಗೊತ್ತಾ

Process of withdrawing currency notes: Do you know what rbi governor said to people
Photo Credit : Twitter

ನವದೆಹಲಿ: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆಯಿಂದ ನಾಗರಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತದಾಸ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, ವಿನಿಮಯ ಮತ್ತು ಠೇವಣಿ ಇರಿಸಲು ಇನ್ನೂ 4 ತಿಂಗಳು ಕಾಲಾವಕಾಶವಿದೆ ಎಂದು ಪ್ರತಿಪಾದಿಸಿದ್ದಾರೆ.

ಆರ್‌ಬಿಐ ನಿರ್ಧಾರದಿಂದ ಅರ್ಥ ವ್ಯವಸ್ಥೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಲಾರದು. ಏಕೆಂದರೆ, ಒಟ್ಟಾರೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಪೈಕಿ ಈ ನೋಟುಗಳ ಪ್ರಮಾಣ ಶೇ.10.8ರಷ್ಟು ಮಾತ್ರ ಎಂದೂ ಅವರು ತಿಳಿಸಿದ್ದಾರೆ.

ಮಂಗಳವಾರದಿಂದ ಶುರುವಾಗುವ ವಿನಿಮಯ ಮತ್ತು ಠೇವಣಿ ಪ್ರಕ್ರಿಯೆ ಸೆ.30ರವರೆಗೆ ಇರಲಿದೆ. ಈ ಅವಧಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಿಂದ ಬ್ಯಾಂಕ್‌ಗಳಿಗೆ ಬಂದು ಸೇರಲಿದೆ ಎಂಬ ವಿಶ್ವಾಸವನ್ನೂ ದಾಸ್‌ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್‌ ಪಂಪ್‌ಗ್ಳಿಗೆ ಹರಿದುಬಂದ ನೋಟುಗಳು!

ಮಧ್ಯಪ್ರದೇಶದ ಇಂದೋರ್‌ನ ಪೆಟ್ರೋಲ್‌ಪಂಪ್‌ಗ್ಳಿಗೆ ಈಗ 2 ಸಾವಿರ ರೂ. ಮುಖಬೆಲೆಯ ನೋಟುಗಳೇ ಹರಿದುಬರಲಾರಂಭಿಸಿವೆ. ನೋಟು ವಾಪಸ್‌ ಘೋಷಣೆ ಬಳಿಕ 100ರೂ. ಪೆಟ್ರೋಲ್‌ ಹಾಕಲು ಬಂದವರು ಕೂಡ 2,000ರೂ. ನೋಟನ್ನೇ ನೀಡುತ್ತಿದ್ದಾರೆ. ಪಿಂಕ್‌ ನೋಟುಗಳ ಮೂಲಕ ಪೆಟ್ರೋಲ್‌ ಖರೀದಿಸುತ್ತಿರುವವರ ಪ್ರಮಾಣ ಹಿಂದಿಗಿಂತ 5 ಪಟ್ಟು ಅಧಿಕವಾಗಿದೆ ಎಂದು ಇಂದೋರ್‌ ಪೆಟ್ರೋಲ್‌ ಪಂಪ್‌ ಡೀಲರ್‌ಗಳ ಸಂಘ ತಿಳಿಸಿದೆ.

See also  ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೆ ಮೊಟ್ಟೆ ಯೋಜನೆಯನ್ನು ವಿಸ್ತರಿಸಲಿರುವ ರಾಜ್ಯ ಸರ್ಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು