ದೆಹಲಿ: ಪಂಜಾಬ್ ಪೊಲೀಸರು ರಾಜ್ಯದ ಮೋಸ್ಟ್ ವಾಂಟೆಡ್ ದರೋಡೆಕೋರ ಅರ್ಷ್‌ದೀಪ್ ಸಿಂಗ್ ಅಲಿಯಾಸ್ ವಿಕ್ಕಿ ಗೌಂಡರ್ ಮತ್ತು ಅವರ ಇಬ್ಬರು ಸಹಾಯಕರನ್ನು ಹೊಡೆದುರುಳಿಸುವುದರೊಂದಿಗೆ, ಪೊಲೀಸರು ಮಾಲ್ವಾ ಪ್ರದೇಶದ ಗ್ಯಾಂಗ್‌ಗಳಿಗೆ ಕುಣಿಕೆಯನ್ನು ಬಿಗಿಗೊಳಿಸಿದ್ದಾರೆ.
ಈ ಪ್ರದೇಶವು ಈ ಗ್ಯಾಂಗ್‌ಗಳ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಇನ್ನು ಪಂಜಾಬ್ನಲ್ಲಿ ದರೋಡೆಕೋರರು ವ್ಯಾಪರಿಗಳಿಂದ ಮತ್ತು ಜನರಿಂದ ಸುಲಿಗೆ ಮಾಡಿದ ಹಣವನ್ನು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಚಾರ್ಜ್ ಶೀಟ್ನಲ್ಲಿ ಈ ಅಂಶ ಹೊರಬಿದ್ದಿದೆ.
ಇತ್ತೀಚೆಗೆ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ಖಲಿಸ್ತಾನ್ ಬೆಂಬಲಿಗರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಸಹಾಯದಿಂದ ಪಂಜಾಬ್ನಲ್ಲಿರುವ ದರೋಡೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದಾರೆ. ಇನ್ನು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಿಗಿಭದ್ರತೆ ಇರುವ ಕಾರಣ ನೇಪಾಳದ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದಾರೆ ಎಂದು ಎನ್ಐಎ ವರದಿಯಲ್ಲಿ ತಿಳಿಸಿದೆ.ಈ ಶಸ್ತ್ರಾಸ್ತ್ರಗಳನ್ನು ಪಂಜಾಬ್ ದರೋಡೆಕೋರರಿಗೆ ಕಳುಹಿಸಲು ವಿದೇಶದಲ್ಲಿ ಕುಳಿತಿರುವ ಖಲಿಸ್ತಾನಿ ಉಗ್ರರು ಆದೇಶ ನೀಡುತ್ತಿದ್ದಾರೆ ಎಂದು ತಿಳಿಸಿದೆ.