ನವದೆಹಲಿ: ಮಹಿಳೆಯರು ಗರ್ಭಾಧಾರಣೆ ಅವಧಿಯಲ್ಲಿ ಧೂಮಪಾನ ಚಟವನ್ನು ಅಂಟಿಸಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.
ತಂಬಾಕು ಸೇವನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನ ಈ ನಿಟ್ಟಿನಲ್ಲಿ ತಜ್ಞರ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಗರ್ಭಧಾರಣೆಯ ಕನಿಷ್ಠ ನಾಲ್ಕು ತಿಂಗಳ ಮೊದಲು ಕಡ್ಡಾಯವಾಗಿ ಮಹಿಳೆಯರು ಧೂಮಪಾನ ತ್ಯಜಿಸಲೇಬೇಕು ಎಂದು ಮೀರಾ ರೋಡ್ನ ವೊಕ್ಹಾರ್ಡ್ ಆಸ್ಪತ್ರೆಗಳ ಸ್ತ್ರೀರೋಗತಜ್ಞ ಡಾ. ರಾಜಶ್ರೀ ಹೇಳಿದ್ದಾರೆ. ಸ್ತ್ರೀಯರು ಧೂಮಪಾನ ಮಾಡುವುದರಿಂದ ಫಲವತ್ತತೆಗೆ ಗಂಭೀರ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ನಿಷ್ಕ್ರಿಯ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದಲೂ ಜೈವಿಕ ಪ್ರಕ್ರಿಯೆಗಳಿಗೂ ಕೂಡ ಹಾನಿಯಾಗಬಹುದು ಎಂದು ಹೇಳಿದ್ದಾರೆ.