ನವದೆಹಲಿ: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಮಂಗಳವಾರ ಬಾಲಾಪರಾಧಿಗಳ ಗುಂಪೊಂದು ಐಫೋನ್ ಶಾಪ್ ಗೆ ನುಗ್ಗಿ ಮೊಬೈಲ್, ಐಪಾಡ್‌ಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಸಾಗುತ್ತಿರುವ ವಿಡಿಯೋ ವೊಂದು ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ 20 ಮಂದಿಯನ್ನು ಬಂಧಿಸಲಾಗಿದ್ದು, ಎರಡು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಾಲಾಪರಾಧಿಗಳು ಆಪಲ್ ಸ್ಟೋರ್, ಫುಟ್‌ಲಾಕರ್ ಮತ್ತು ಲುಲುಲೆಮನ್ ಮುಂತಾದ ಮಳಿಗೆಗಳ ಏಕಾಏಕಿ ಮೇಲೆ ದಾಳಿ ಮಾಡಿ ಮೊಬೈಲ್‌ಗಳನ್ನು ಕದ್ದು ಸಾಗುವ ದೃಶ್ಯ ವೈರಲ್ ಆಗಿತ್ತು.
ಈ ಸಣ್ಣ ವಯಸ್ಸಿನ ಲೂಟಿಕೋರರು ದಾಳಿ ವೇಳೆ ಅವರು ಮಾಸ್ಕ್ ಧರಿಸಿದ್ದರು ಎಂಬುದು ವಿಡಿಯೋಗಳಲ್ಲಿದೆ. Apple ಸ್ಟೋರ್‌ನ ಡಿಸ್‌ಪ್ಲೇ ಟೇಬಲ್ ಗಳಲ್ಲಿ ಇರಿಸಿದ್ದಐಫೋನ್‌ಗಳು ಮತ್ತು ಐಪ್ಯಾಡ್ ಗಳ ಸೇಫ್ಟಿ ಫೀಚರ್ ಗಳಿಂದಾಗಿ ಕದ್ದರೂ ಕೂಡ ಅದನ್ನು ಬಳಸುವುದು ಅವರಿಗೆ ಸಾಧ್ಯವಾಗಿಲ್ಲ.
🚨Just in: Apple and many stores in Philadelphia being looted. Philly is fallen! #Philadelphia #PA #looting pic.twitter.com/hnfpAJhvIp
— Stay Frosty 🇺🇲 (@brewdoggy) September 27, 2023